

ಬಲ್ಯ ಗ್ರಾಮದ ಸಂಪಡ್ಕದ ಸರಕಾರಿ ಜಾಗದಲ್ಲಿ ರಸ್ತೆ ಅಭಿವೃದ್ಧಿಗೆ ಸ್ಥಳ ಪರಿಶೀಲನೆಗೆಂದು ತೆರಳಿದ್ದ ಗ್ರಾ.ಪಂ ಪಿಡಿಒ ಅವರ ಕಾರನ್ನು ತಡೆದು ತಂಡವೊಂದು ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಜ.2ರಂದು ಸಂಜೆ ನಡೆದಿದೆ.ಈ ಬಗ್ಗೆ ಕಡಬ ಠಾಣೆಯಲ್ಲಿ ಜ.2ರಂದು ಪ್ರಕರಣ ದಾಖಲಾಗಿದೆ.
ಕುಟ್ರುಪಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿಲೈಡ್ ಲಾರೆನ್ಸ್ ರೊಡ್ರಿಗಸ್ ಅವರು, ಬಲ್ಮ ಗ್ರಾಮದ ಕುದ್ರಡ್ಕ ಎಂಬಲ್ಲಿ ಸರಕಾರಿ ಜಾಗದಲ್ಲಿ ಕುಟ್ರುಪಾಡಿ ಗ್ರಾಮ ಪಂಚಾಯತ್ನ 2019-20ನೇ ಸಾಲಿನ ನಿಧಿ 1ರ ಅನುದಾನದ ಕ್ರಿಯಾಯೋಜನೆಯಲ್ಲಿ ಅಳವಡಿಸಿರುವ , ಚಂದ್ರಪ್ಪ ಸಂಪಡ್ಡ ಮನೆ ಇವರ ವಾಸದ ಮನೆಗೆ ಸಂಪರ್ಕ ರಸ್ತೆ ನಿರ್ಮಾಣದ ಕಾಮಗಾರಿಯ ಸ್ಥಳ ಪರಿಶೀಲನೆಗೆಂದು ಗ್ರಾ.ಪಂ. ಸಿಬ್ಬಂದಿಗಳು ಹಾಗೂ ಕಿರಿಯ ಇಂಜಿನಿಯರ್ ಜತೆ ಸ್ಥಳಕ್ಕೆ ತೆರಳಿದ್ದರು.
ಈ ವೇಳೆ ಕುದ್ರಡ್ಕದ ಯಾಕೂಬ್, ಅಬ್ದುಲ್ ಕರೀಂ, ಹನೀಫ್, ರಹಿಮತ್, ಇಕ್ಬಾಲ್ ಎಂಬವರು ಸೇರಿ ಅವಾಚ್ಯ ಶಬ್ದಗಳಿಂದ ಗ್ರಾ.ಪಂ. ಪಿಡಿ ಅವರಿಗೆ ಬೈದು, ಕೊಲೆ ಬೆದರಿಕೆ ಹಾಕಿದಲ್ಲದೆ ಪಂಚಾಯತ್ ಸಿಬ್ಬಂದಿಗಳ ಮೊಬೈಲ್ಗಳನ್ನು ಕಸಿದುಕೊಂಡು ರೆಕಾರ್ಡ್ ಮಾಡಲಾಗಿರುವ ವೀಡಿಯೋಗಳನ್ನು ಡಿಲಿಟ್ ಮಾಡಿ ಸಿಬ್ಬಂದಿಗಳಿಗೂ ಜೀವ ಬೆದರಿಕೆ ಒಡ್ಡಿದ್ದಾರೆ ಎಂದುದೂರಿನಲ್ಲಿ ಆರೋಪಿಸಲಾಗಿದೆ. ದೂರನ್ನು ಸ್ವೀಕರಿಸಿರುವ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ..