Header Ads
Header Ads
Breaking News

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾರ್ಕಳದ ಮಾಜಿ ಶಾಸಕ ಗೋಪಾಲ ಭಂಡಾರಿ ವಿಧಿವಶ

ಕಾಂಗ್ರೆಸ್ ನಾಯಕ, ಕಾರ್ಕಳ ಕ್ಷೇತ್ರದ ಮಾಜಿ ಶಾಸಕ ಗೋಪಾಲ್ ಭಂಡಾರಿ ಬಸ್‍ನಲ್ಲಿಯೇ ವಿಧಿವಶರಾದರು. ಗುರುವಾರ ಮಧ್ಯಾಹ್ನ ಅವರು ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣ ಕೈಗೊಂಡಿದ್ದರು. ಮಂಗಳೂರು ಬಂದರೂ ಗೋಪಾಲ್ ಭಂಡಾರಿ ಅವರು ಎಚ್ಚರಗೊಳ್ಳಲಿಲ್ಲ. ಬಸ್ ನಿರ್ವಾಹಕರು ಗಮನಿಸಿದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಗೋಪಾಲ್ ಭಂಡಾರಿ ಅವರ ಮೃತದೇಹವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಇಡಲಾಗಿತು ಗೋಪಾಲ್ ಭಂಡಾರಿ ಅವರು ಅವರು 2008ರ ಚುನಾವಣೆಯಲ್ಲಿ 56,529 ಮತಗಳನ್ನು ಪಡೆದು ಬಿಜೆಪಿಯ ವಿ.ಸುನೀಲ್ ಕುಮಾರ್ ವಿರುದ್ಧ ಗೆಲುವು ಸಾಧಿಸಿದ್ದರು. 2013ರ ಚುನಾವಣೆಯಲ್ಲಿ 60,785 ಮತಗಳನ್ನು ಪಡೆದು ಸುನೀಲ್ ಕುಮಾರ್ ವಿರುದ್ಧ ಸೋತಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ 48,679 ಮತಗಳನ್ನು ಪಡೆದು ಬಿಜೆಪಿಯ ಸುನೀಲ್ ಕುಮಾರ್ ಅವರ ವಿರುದ್ಧ ಸೋಲು ಕಂಡಿದ್ದರು. ಗೋಪಾಲ ಭಂಡಾರಿ ಅವರ ನಿಧನಕ್ಕೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

Related posts

Leave a Reply

Your email address will not be published. Required fields are marked *