Header Ads
Header Ads
Breaking News

ಬಹುಮತ ಇಲ್ಲದೇ ಬಿಎಸ್‌ವೈ ಹೇಗೆ ಸಿಎಂ ಆದರು..? ಯಾವ ಆಧಾರದಲ್ಲಿ ಪ್ರಮಾಣವಚನ ಸ್ವೀಕರಿಸಿದರು..? : ಬಿ ರಮಾನಾಥ್ ರೈ

ಇದು ಕಮಲದ ಕುದುರೆ ಆಪರೇಶನ್. ಬಹುಮತ ಇಲ್ಲದೇ ಬಿಎಸ್‌ವೈ ಹೇಗೆ ಸಿಎಂ ಆದರು..? ಯಾವ ಆಧಾರದಲ್ಲಿ ಬಿಎಸ್‌ವೈ ಪ್ರಮಾಣವಚನ ಸ್ವೀಕರಿಸಿದರು..?ಎಂದು ಮಾಜಿ ಸಚಿವ ಬಿ ರಮನಾಥ್ ರೈ ಪ್ರಶ್ನಿಸಿದ್ದಾರೆ. ಅವರು ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್, ಜೆಡಿಎಸ್ ಬಿಟ್ಟು ಹೋದ ವಿಶ್ವನಾಥ್ ಪಕ್ಷ ನಿಷ್ಠೆ ಬಿಟ್ಟಿದ್ದಾರೆ. ನನಗೂ ಗೃಹಸಚಿವನಾಗುವ ಆಫರ್ ಎರಡು ಸಲ ಬಂದಿತ್ತು. ನಿಷ್ಠಾವಂತ ಕಾರ್ಯಕರ್ತನಾಗಿ ಇರುವುದು ದೊಡ್ಡ ನಿಷ್ಠೆ. ಮುಂಬೈಗೆ ಹೋದವರು ಪಕ್ಷ ನಿಷ್ಠೆ ತೊರೆದು ಹೋದವರು ಎಂದು ಮಂಗಳೂರಲ್ಲಿ ಮಾಜಿ ಸಚಿವ ಪ್ರತಿಕ್ರಿಯಿಸಿದ್ದಾರೆ. ಇನ್ನು ಅಧಿಕಾರದ ಮದದಲ್ಲಿ ಶಾಸಕರ ಕಾಲಹರಣ ಮಾಡುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆಗೆ ಪ್ರಯತ್ನಿಸುತ್ತಿಲ್ಲ. ಜನರ ಜೀವನದ ಜೊತೆ ಜನಪ್ರತಿನಿಧಿಗಳು ಚೆಲ್ಲಾಟ ಆಡುತ್ತಿದ್ದಾರೆ. ಜನಪ್ರತಿನಿಧಿಗಳ ನಿಷ್ಕ್ರಿಯತೆಯನ್ನು ಖಂಡಿಸುತ್ತೇನೆ. ಶಾಸಕರು ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಮಂಗಳೂರಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ವ್ಯಂಗ್ಯವಾಡಿದ್ದಾರೆ.

Related posts

Leave a Reply

Your email address will not be published. Required fields are marked *