Header Ads
Breaking News

ಬಾಡಿಗೆ ವಿಚಾರದಲ್ಲಿ ರಿಕ್ಷಾ ಚಾಲಕರ ನಡುವೆ ಮಾತಿನ ಚಕಮಕಿ

ರಿಕ್ಷಾ ಚಾಲಕರ ನಡುವೆ ಮಾತಿನ ಚಕಮಕಿ ನಡೆದು  ಪೋಲಿಸರು  ಮತ್ತು ಅಟೋ ಚಾಲಕ ಮಾಲಕ ಸಂಘದ ಪದಾಧಿಕಾರಿಗಳ ಮಧ್ಯಸ್ಥಿಕೆಯಿಂದ ಸುಖಾಂತ್ಯಗೊಂಡಿದೆ. ಕೆಲವೊಂದು ರಿಕ್ಷಾ ಚಾಲಕರು ಉಚ್ಚಿಲ ಪಣಿಯೂರು ರಸ್ತೆಯಲ್ಲಿ, ಉಚ್ಚಿಲದಿಂದ ಪಣೆಯೂರಿಗೆ, ಪಣಿಯೂರಿನಿಂದ ಉಚ್ಚಿಲಕ್ಕೆ ಬಾಡಿಗೆ ಮಾಡುತ್ತಿದ್ದರು. ಇದರಿಂದಾಗಿ ರಿಕ್ಷಾ ನಿಲ್ದಾಣದಲ್ಲಿ ಬಾಡಿಗೆಗಾಗಿ ಕಾಯುತ್ತಿರುವ ರಿಕ್ಷಾ ಚಾಲಕರಿಗೆ ತೊಂದರೆ ಉಂಟಾಗುತ್ತಿದ್ದ ಹಿನ್ನೆಲೆ ಉಚ್ಚಿಲ-ಪಣಿಯೂರು ರಸ್ತೆಯಲ್ಲಿ ರಿಕ್ಷಾ ಚಾಲಕರ ಬಾಡಿಗೆ ಮಾಡುವುದನ್ನು ನಿಲ್ಲಿಸುವಂತೆ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದರು. ಇದಕ್ಕೆ ವಿರುದ್ಧವಾಗಿ ನಡೆದವರಿಗೆ 200 ರೂ.ದಂಡ ವಿಧಿಸುದಾಗಿಯೂ ತೀರ್ಮಾನಿಸಲಾಗಿತ್ತು.

ಆದರೆ ರಿಕ್ಷಾ ಚಾಲಕ ಮಾಲಕರ ಸಂಘದ ತೀರ್ಮಾನಕ್ಕೆ ವಿರುದ್ಧವಾಗಿ ಕೆಲವೊಂದು ಚಾಲಕರು ನಿಶೇಧಿತ ಪ್ರದೇಶದಲ್ಲಿ ಬಾಡಿಗೆ ಮಾಡುವುದನ್ನು ಮುಂದುವರಿಸಿದ್ದು, ಇದೇ ವಿಚಾರವಾಗಿ ಗುರುವಾರ ಚಾಲಕರ ನಡುವೆ ಮಾತಿನ ಚಕಮಕಿ ನಡೆದಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಪೋಲಿಸರು  ದಾವಿಸಿ ಮಾತುಕತೆ ನಡೆಸಿದ್ದಾರೆ.ಕೆಲವೊಂದು ನಿಗದಿತ ಸ್ಥಳದಿಂದ ಬಾಡಿಗೆ ಮಾಡದಂತೆ ಯೂನಿಯನ್ ತೀರ್ಮಾನದಂತೆ ಕ್ರಮಕೈಗೊಳ್ಳಲಾಗಿತ್ತು.ಅದಕ್ಕೆ ವಿರುದ್ಧವಾಗಿ ನಡೆದವರಿಗೆ ದಂಡ ವಿಧಿಸಲಾಗಿದೆ.ಇವತ್ತು ಚಾಲಕರ ನಡುವಿನ ತಪ್ಪು ಗ್ರಹಿಕೆಯಿಂದ ಮಾತುಕತೆ ನಡೆದಿದೆ. ಈ ಬಗ್ಗೆ ಸರಿಪಡಿಸಿಕೊಂಡಿದ್ದೇವೆ ಎಂದು ಉಚ್ಚಿಲ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಸಿರಾಜ್ ಮಾಹಿತಿ ನೀಡಿದ್ದಾರೆ.

Related posts

Leave a Reply

Your email address will not be published. Required fields are marked *