
ಈ ಸಾಲಿನ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ರಾಕೇಶ್ ಕೃಷ್ಣ, ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಂಗಳೂರಿನಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ್ದಾರೆ.ಈ ವೇಳೆ ಇನ್ನಷ್ಟು ಸಾಧನೆಗೈಯಲು ಪ್ರಧಾನಿ ಮೋದಿ ಈ ಸಂದರ್ಭ ವಿದ್ಯಾರ್ಥಿಗೆ ಇನ್ನಷ್ಟು ಪ್ರೇರಣೆಯ ಮಾತುಗಳನ್ನಾಡಿದ್ದಾರೆ. ಪ್ರಸ್ತುತ ಮಂಗಳೂರು ನಗರದ ಎಕ್ಸ್ ಪರ್ಟ್ ಪಿಯು ಕಾಲೇಜಿನ ವಿಜ್ನಾನ ವಿಭಾಗದ ವಿದ್ಯಾರ್ಥಿಯಾದ ರಾಕೇಶ್ ಕೃಷ್ಣ ಅವರ ಸೀಡೋಗ್ರಾಫರ್ ಅನ್ನೋ ಬೀಜ ಬಿತ್ತನೆಯ ಕೃಷಿ ಯಂತ್ರ ಸಂಶೋಧನೆಗೆ ಈ ಪ್ರಶಸ್ತಿ ಸಂದಿದೆ. ಪ್ರಧಾನಿ ಮೋದಿ ಜೊತೆಗಿನ ಸಂವಾದ ಹಾಗೂ ತನ್ನ ಸಂಶೋಧನೆ ಬಗ್ಗೆ ರಾಕೇಶ್ ಕೃಷ್ಣ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.