Header Ads
Breaking News

ಬಿಜೆಪಿಗರು ದೇಶಪ್ರೇಮಿಗಳಲ್ಲ, ದ್ವೇಷಪ್ರೇಮಿಗಳು: ಬಿಜೆಪಿ ವಿರುದ್ಧ ಕಿಡಿಕಾರಿದ ಡಿಕೆಶಿ!

ಪುತ್ತೂರು: ದೇಶಪ್ರೇಮಿಗಳೆಂದು ಹೇಳುತ್ತಿರುವ ಬಿಜೆಪಿಗರು ಜಾತಿ ವೈಷಮ್ಯ ಬೆಳೆಸಿಕೊಳ್ಳುತ್ತಾ, ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜನೆ ಮಾಡುತ್ತಿದ್ದು, ಇವರು ದೇಶಪ್ರೇಮಿಗಳಲ್ಲ, ಧ್ವೇಷ ಪ್ರೇಮಿಗಳು ಎಂದು ರಾಜ್ಯ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.

ಅವರು ಸೋಮವಾರ ಸಂಜೆ ನಗರದ ದರ್ಬೆ ಮೈದಾನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. ನಮ್ಮ ದೇಶವು ಅನೇಕ ಭಾಷೆ, ಜಾತಿ, ಜನಾಂಗವನ್ನು ಹೊಂದಿದ್ದು, ಅನೇಕತೆಯಲ್ಲಿ ಏಕತೆಯ ಸಂಸ್ಕೃತಿಯೇ ದೇಶದ ದೊಡ್ಡ ಆಸ್ತಿ, ದೇಶಪ್ರೇಮದ ಬಗ್ಗೆ ಮಾತನಾಡುವ ಬಿಜೆಪಿಗರು ಈ ದೇಶದ ಐಕ್ಯತೆ ಮತ್ತು ಸಮಗ್ರತೆಯ ಬಗ್ಗೆ ಮಾತನಾಡುತ್ತಿಲ್ಲ. ಎಲ್ಲಕ್ಕೂ ಮೀರಿದ್ದು ಮಾನವ ಧರ್ಮವಾಗಿದ್ದು, ದೇಶದ ಎಲ್ಲಾ ವರ್ಗದ ಸಮಾಜದ ರಕ್ಷಣೆ ಜನನಾಯಕರ ಮೇಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಎಲ್ಲಾ ವರ್ಗದ ಜನರು ಅಧಿಕಾರವನ್ನು ಪಡೆದುಕೊಂಡಂತೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಮಾತನಾಡಿ ಬಿಜೆಪಿ ದೇಶಕ್ಕೆ ಅತ್ಯಂತ ದ್ರೋಹ ಮಾಡಿದೆ. ಪ್ರಧಾನಿ ದೇಶಕ್ಕೆ ಗೌರವ ತರುವ ಕೆಲಸ ಮಾಡಿಲ್ಲ. ಈ ಬಾರಿಯ ಚುನಾವಣೆಯ ದೇಶದ ಗೆಲುವಿಗಾಗಿ ನಡೆಯಲಿದ್ದು, ಮತದಾರರು ಯಾವುದೇ ಭಾವನಾತ್ಮಕತೆಗೆ ಬಲಿಯಾಗದೆ ಆತ್ಮಾವಲೋಕನ ಮಾಡಿ ಮತದಾನ ಮಾಡಬೇಕು ಎಂದರು.

ಮಾಜಿ ಸಚಿವ ಬಿ. ರಮಾನಾಥ ರೈ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ಅಮರನಾಥ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಿ ವಿಟ್ಲ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *