Header Ads
Header Ads
Header Ads
Breaking News

ಬಿಜೆಪಿಯಿಂದ ಸುಳ್ಳು ಆರೋಪದ ರಾಜಕೀಯ ಆರೋಪ ಮಾಡಿದವರ ಮೇಲೆ ಮಾನನಷ್ಟ ಮೊಕದ್ದಮೆಗೆ ಸಿದ್ಧತೆ ಮಂಗಳೂರಿನಲ್ಲಿ ಐವನ್ ಡಿಸೋಜಾ ಮಾಹಿತಿ

ಬಿಜೆಪಿಗೆ ಕಾಂಗ್ರೆಸ್ ವಿರುದ್ಧ ರಾಜಕೀಯ ಮಾಡೋದಕ್ಕೆ ಯಾವುದೇ ಪ್ರಬಲ ಅಸ್ತ್ರಗಳಿಲ್ಲ. ಈ ನಿಟ್ಟಿನಲ್ಲಿ ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಝಾ ಹೇಳಿದ್ದಾರೆ.

ಮಂಗಳೂರಿನಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಐವನ್ ಡಿಸೋಝಾ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜಮೀನು ಅಕ್ರಮ ಪರಾಬಾರೆ ನಡೆಸಿರುವ ಆರೋಪ ಮಾಡಿ ಪತ್ರಿಕಾಗೋಷ್ಟಿ ನಡೆಸಿರುವ ಬಿಜೆ ಪುಟ್ಟಸ್ವಾಮಿ, ಗೋ ಮಧುಸೂಧನ್, ಎಸ್ ಆರ್ ವಿಶ್ವನಾಥನ್ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಮಂಗಳೂರು ನ್ಯಾಯಾಲಯದಲ್ಲಿ ಸಲ್ಲಿಸಲಿದ್ದೇನೆ ಎಂದವರು ಹೇಳಿದರು.
ಇದಕ್ಕೂ ಮೊದಲು ತಾವು ನಡೆಸಲು ಉದ್ದೇಶಿಸಿರುವ ಸೌಹಾರ್ದ ದಿಪಾವಳಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಅವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾಜಿ ಮೇಯರ್ ಅಶ್ರಫ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply