Header Ads
Breaking News

ಐವನ್ ಡಿಸೋಜಾ ಆರೋಪಕ್ಕೆ ಬಿಜೆಪಿ ನಾಯಕರ ತಿರುಗೇಟು

ಮಂಗಳೂರು ಸ್ಮಾರ್ಟ್‍ಸಿಟಿ ಯೋಜನೆ ಅವ್ಯವಹಾರ ಬಗ್ಗೆ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಕೆಪಿಸಿಸಿ ವಕ್ತಾರ ಐವನ್ ಡಿಸೋಜಾ ಅವರು ಆರೋಪ ಮಾಡಿದ್ದು, ಅವರ ಆರೋಪಕ್ಕೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ.

ಅವರು ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಮುಖಂಡರಾದ ಸುಧೀರ್ ಕುಮಾರ್, ಪ್ರೇಮಾನಂದ ಶೆಟ್ಟಿ ಅವರು, ಎರಡು ವರ್ಷದ ಅವಧಿಯಲ್ಲಿ ಕಾಂಗ್ರೆಸ್ ಕೂಡಾ ಆಡಳಿತದಲ್ಲಿತ್ತು. ಕಾಂಗ್ರೆಸ್ ಸಚಿವರ ಕಾಲದಲ್ಲೇ ಯೋಜನೆ ಹಾಕಿಕೊಳ್ಳಲಾಗಿತ್ತು. ಕಾಂಗ್ರೆಸ್ ಹಿಂದಿನ ಶಾಸಕ, ಸಚಿವರ ಬಗ್ಗೆಯೇ ಅವರಿಗೆ ಅನುಮಾನವಿದ್ದಿರಬೇಕು. ಎಸಿಬಿ ತನಿಖೆಗೆ ಒತ್ತಾಯಿಸಿದ್ದನ್ನ ನಾವೂ ಸ್ವಾಗತಿಸುತ್ತೇವೆ ಎಂದು ಅವರು, ಪಿಡಬ್ಲ್ಯುಡಿ ದರಪಟ್ಟಿಯಂತೆ ಕಾಮಗಾರಿ ಕೈಗೊಳ್ಳಲಾಗಿದೆ. ಅವ್ಯವಹಾರ ಆಗಿದ್ರೆ ಐವನ್ ಡಿಸೋಜಾ ಅವರು ಬಯಲಿಗೆಳೆಯಲಿ. ಎಂಟು ವಾರ್ಡ್ ಗಳಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದೆ. ಇದೆಲ್ಲದರ ಪ್ರಕ್ರಿಯೆ ನಡೆದಿರುವುದು ಕಾಂಗ್ರೆಸ್ ಅವಧಿಯಲ್ಲಿ. ಬಿಜೆಪಿ ಆಡಳಿತದ ಅಭಿವೃದ್ಧಿ ಕಾಂಗ್ರೆಸ್ ಗೆ ಸಹಿಸಲಾಗುತ್ತಿಲ್ಲ. ಅತ್ಯಂತ ಕ್ಷಿಪ್ರಗತಿಯ ಅಭಿವೃದ್ಧಿಯಲ್ಲಿ ಬಿಜೆಪಿ ತೊಡಗಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಕೆಲಸ ವೇಗ ಪಡೆದಿದೆ. ಶಕ್ತಿನಗರ ನಿರ್ವಸಿತರ ಜಮೀನು ವಿಚಾರದಲ್ಲೂ ಕಾಂಗ್ರೆಸ್ ನಾಯಕರ ರಾಜಕೀಯ ಮಾಡುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ನಿವೇಶನ ಪತ್ರ ನೀಡಿ ಮೋಸ ಮಾಡಿದ್ದಾರೆ. ಶೀಘ್ರವೇ ನಿರ್ವಸಿತರಿಗೆ ವಸತಿ ನಿರ್ಮಾಣ ಆರಂಭಿಸಲಿದ್ದೇವೆ. ತೆಂಕ ಎಡಪದವುವಿನಲ್ಲಿ ಈಗಾಗಲೇ ನಿವೇಶನ ಗೊತ್ತು ಮಾಡಲಾಗಿದೆ. ಹಂತ ಹಂತವಾಗಿ ಮನೆ ನಿರ್ಮಾಣ ನಡೆಯಲಿದೆ ಎಂದು ಹೇಳಿದರು.

Related posts

Leave a Reply

Your email address will not be published. Required fields are marked *