Header Ads
Header Ads
Breaking News

ಬಿಜೈ ಅನೆಗುಂಡಿ ಪ್ರದೇಶಕ್ಕೆ ಸಚಿವ ಆರ್.ವಿ.ದೇಶಪಾಂಡೆ ಭೇಟಿ

ಅಧಿಕಾರಿ ತಂಡದಿಂದ ಪರಿಶೀಲನೆ ನಡೆಸಿದ ಸಚಿವರುಮಂಗಳೂರಿನ ನೆರೆ ಹಾನಿ ಪ್ರದೇಶಕ್ಕೆ ಕಂದಾಯ ಸಚಿವ ಆರ್. ವಿ ದೇಶಪಾಂಡೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಬಿಜೈ ಅನೆಗುಂಡಿ ಪ್ರದೇಶಕ್ಕೆ ಭೇಟಿ ನೀಡಿದ ಸಚಿವರು, ಇತ್ತೀಚೆಗೆ ಮಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಬಿಜೈ ನಿವಾಸಿ ಭವಾನಿ ಹಾಗೂ ಅನುರಾಧ ಕುಟುಂಬಕ್ಕೆ ಪರಿಹಾರ ವಿತರಿಸಿರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಭಯ ಜಿಲ್ಲೆಗಳಲ್ಲಿ ಮಳೆಯಿಂದ ಹಾನಿಗೊಳಗಾಗಿದೆ. ಸಂತ್ರಸ್ತರಿಗೆ ಪರಿಹಾರ ವ್ಯವಸ್ಥೆ ನೀಡಲಾಗಿದೆ. ಈಗಗಾಲೇ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಮೂರು ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡಿದ್ದೇವೆ. ಇದಲ್ಲದೆ ಉಭಯ ಜಿಲ್ಲೆಯಲ್ಲಿ ಕನಿಷ್ಠ ೫ ಕೋಟಿ ಇಡುವಂತೆ ಜಿಲ್ಲಾದಿಕಾರಿಗೆ ಆದೇಶಿಸಲಾಗಿದೆ. ಚಾರ್ಮಾಡಿ ಘಾಟ್‌ನಲ್ಲಿ ಭಾರೀ ಭೂಕುಸಿತವಾಗಿದೆ. ಸದ್ಯಕ್ಕೆ ಚಾರ್ಮಾಡಿಯಲ್ಲಿ ಸಂಚಾರ ವ್ಯವಸ್ಥೆ ಸ್ಥಗಿತಗೊಳಿಸಲಾಗಿದೆ. ಸೂಕ್ತ ವ್ಯವಸ್ಥೆಯ ಬಳಿಕ ಸಂಚಾರಕ್ಕೆ ಅನು ಮಾಡಲಾಗುವುದು ಎಂದು ಹೇಳದರು.

Related posts

Leave a Reply