Header Ads
Header Ads
Header Ads
Header Ads
Header Ads
Header Ads
Breaking News

ಬಿರುಕುಬಿಟ್ಟ ಸ್ಲ್ಯಾಬ್, ಕುಸಿದು ಬೀಳುವ ಸ್ಥಿತಿಯಲ್ಲಿ ಕಟ್ಟಡ : ಇದು ಬೊಂದೇಲ್ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಅವ್ಯವಸ್ಥೆ ..!

 ಅದು ಮಂಗಳೂರಿನ ಹೆಸರಾಂತ ಸರ್ಕಾರಿ ಕಾಲೇಜು, ಕೋಟ್ಯಾಂತರ ರೂ. ಅನುದಾನದಲ್ಲಿ ಕಟ್ಟಲಾದ ಕಟ್ಟಡ. ಇಲ್ಲಿ ಎಷ್ಟೇ ಫೆಸಿಲಿಟಿ ಇದ್ರೂ ಕೂಡಾ ಕಾಲೇಜಿನ ಕಟ್ಟಡ ಇಂದೋ ನಾಳೆಯೋ ಬೀಳುವಂತ ಪರಿಸ್ಥಿತಿಯಲ್ಲಿದೆ. ಅಷ್ಟಕ್ಕೂ ಆ ಕಾಲೇಜು ಯಾವುದು..?ಇಲ್ಲಿಯ ಸಮಸ್ಯೆಯಾದ್ರೂ ಏನು ಅಂತ ಕೇಳೋದಾದ್ರೆ ಈ ಸ್ಪೆಷಲ್ ರಿಪೋರ್ಟ್ ನೋಡಿ..

ಅವೈಜ್ಞಾನಿಕ ಕಾಮಗಾರಿಯಿಂದಾಗಿ ಎದ್ದು ಕಾಣ್ತಾ ಇರೋ ಕಬ್ಬಿಣದ ರಾಡ್‍ಗಳು ಬಿರುಕುಬಿಟ್ಟ ಸ್ಲ್ಯಾಬ್, ಪಾಳು ಬಿದ್ದ ಪರಿಸ್ಥಿತಿಯಲ್ಲಿರೋ ಕಾಲೇಜು ಕಟ್ಟಡ, ಇಷ್ಟೆಲ್ಲಾ ದೃಶ್ಯ ಕಂಡು ಬಂದಿದ್ದು, ಮಂಗಳೂರಿನ ಬೋಂದೇಲ್‍ನಲ್ಲಿರುವ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ. ಹೌದು..ಕೋಟ್ಯಾಂತರ ರೂ. ಅನುದಾನದಲ್ಲಿ ನಿರ್ಮಾಣಗೊಂಡ ಕಾಲೇಜು ಕಟ್ಟಡ ಇದೀಗ ಇಂದೋ ನಾಳೆಯೋ ಬೀಳುವ ಪರಿಸ್ಥಿತಿಯಲ್ಲಿದೆ. ವಿದ್ಯಾರ್ಥಿಗಳಂತೂ ಜೀವಭಯದಲ್ಲಿರಬೇಕಾದ ಪರಿಸ್ಥಿತಿ ಕೂಡಾ ಉದ್ಭವವಾಗಿದೆ.

ಇಲ್ಲಿ ವಿಶಾಲವಾದ ಪ್ರದೇಶದಲ್ಲಿ ಹಲವಾರು ಬಿಲ್ಡಿಂಗ್‍ಗಳು ಕಾಣುತ್ತೆ. ಆದ್ರೆ ಯಾವುದೇ ಬಿಲ್ಡಿಂಗ್‍ಗಳು ಸುಸಜ್ಜಿತ ರೀತಿಯಲ್ಲಿ, ವ್ಯವಸ್ಥಿತ ರೀತಿಯಲ್ಲಿ ನಿರ್ಮಾಣಗೊಂಡಿಲ್ಲ. ಈಗಾಗಲೇ ಒಂದು ಕಟ್ಟಡದ ಕೆಲಸ ಪೂರ್ಣವಾಗಿದೆ. ಆದ್ರೆ ಅದು ಕೂಡಾ ಅಧಿಕೃತವಾಗಿ ಉದ್ಘಾಟನೆಗೊಂಡಿಲ್ಲ. ಆದ್ದರಿಂದ ಇಲ್ಲಿ ಕಲಿಯುವ ಮಕ್ಕಳಿಗೂ ತುಂಬಾ ಅನಾನುಕೂಲವಾಗಿದೆ. ಆಡಿಟೋರಿಯಂನಲ್ಲಿ ಎಲ್ಲಾ ಸಿಮೆಂಟ್ ಬಿದ್ದು ಕಬ್ಬಿಣದ ರಾಡ್‍ಗಳು ಕಾಣಸಿಗುತ್ತೆ. ವಿದ್ಯಾರ್ಥಿಗಳು ಈ ಕಟ್ಟಡದಲ್ಲಿ ಇರುವಂತಹ ಸಂದರ್ಭ ಅನಾಹುತ ಸಂಭವಿಸಿದ್ರೆ ಯಾರು ಹೊಣೆ..? ಅಂತ ಹೇಳ್ತಾರೆ ಸ್ಥಳೀಯರಾದ ರವೀಂದ್ರ ನಾಥ್ ಕುಡುಪು.ಒಟ್ಟಿನಲ್ಲಿ 400ರಷ್ಟು ವಿದ್ಯಾರ್ಥಿಗಳು ವ್ಯಾಸಾಂಗ ಮಾಡ್ತಾ ಇರೋ ಈ ಕಾಲೇಜಿನ ಕಟ್ಟಡ ಸಂಪೂರ್ಣ ಹದಗೆಟ್ಟಿದ್ದು ವಿದ್ಯಾರ್ಥಿಗಳು ಜೀವಭಯದಲ್ಲಿರಬೇಕಾದ ಪರಿಸ್ಥಿತಿ ಎದುರಾಗಿದೆ. ಇನ್ನಾದರೂ ಈ ಸಮಸ್ಯೆಗೆ ಮುಕ್ತಿ ಸಿಗುತ್ತಾ ಅನ್ನೋದನ್ನ ಕಾದುನೋಡಬೇಕಾಗಿದೆ.

Related posts

Leave a Reply

Your email address will not be published. Required fields are marked *