
ನಾನು ಭಾರತೀಯ ಜನತಾ ಪಾರ್ಟಿಯಲ್ಲಿ ಇದ್ದರೂ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿಯವರ ದೊಡ್ಡ ಅಭಿಮಾನಿಯಾಗಿದ್ದು, ಬಿಲ್ಲವ ಸಮಾಜಕ್ಕೆ ಯಾವುದೇ ರೀತಿಯ ಅಗೌರವ ತೋರಿಲ್ಲ. ಆದರೂ ಬಿಲ್ಲವ ಸಮಾಜ ಬಾಂಧವರಿಗೆ ನನ್ನಿಂದಾಗಿ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ” ಎಂದು ಬಿಜೆಪಿ ಮುಖಂಡ ಕೆ.ಪಿ.ಜಗದೀಶ್ ಅಧಿಕಾರಿ ಹೇಳಿದ್ದಾರೆ.
ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ”ಧರ್ಮ ಆಡಳಿತ ಸಭೆಯಲ್ಲಿ ಯಾವುದೇ ನಿರ್ದಿಷ್ಟ ಧರ್ಮದವರನ್ನು ಕೀಳರಿಮೆಯಿಂದ ಕಾಣುವುದಿಲ್ಲ. ಧರ್ಮ ಜಾತಿ ಪಂಗಡ ಭಾಷೆ ಸಂಸ್ಕೃತಿಯ ವಿಚಾರದಲ್ಲಿ ಭೇದಭಾವ ಮಾಡಿದವನಲ್ಲ. ಗೌರವ ನೀಡುವ ಪರಂಪರೆ ಹೇಗೆ ಮುಂದುವರೆಯುತ್ತದೆ ಎಂಬ ವಿಚಾರವನ್ನು ಧರ್ಮಸಭೆಯಲ್ಲಿ ಹೇಳಿಕೆ ನೀಡಿದ್ದೇನೆ. ನಾನು ಬಿಜೆಪಿಯಲ್ಲಿದ್ದರೂ ಜನಾರ್ದನ ಪೂಜಾರಿಯವರ ದೊಡ್ಡ ಅಭಿಮಾನಿಯಾಗಿದ್ದು, ಬಿಲ್ಲವ ಸಮಾಜದ ಬಾಂಧವರಿಗೆ ಹಲವಾರು ರೀತಿಯ ಸಹಕಾರ ನೀಡುತ್ತ ಬಂದಿದೆ ಎಂದು ತಿಳಿಸಿದರು.
ಜಗದೀಶ್ ಅಧಿಕಾರಿ ತುಳುನಾಡಿನ ವೀರ ಪುರುಷರಾದ ಕೋಟಿ-ಚೆನ್ನಯರ ಇತಿಹಾಸವನ್ನು ತಿರುಚಿ ಮಾತನಾಡಿದ್ದಾರೆ ಹಾಗೂ ಮಾಜಿ ಸಚಿವ ಜನಾರ್ದನ ಪೂಜಾರಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಬಿಲ್ಲವ ಸಮಾಜದವರ ಮನಸ್ಸಿಗೆ ಘಾಸಿ ಉಂಟು ಮಾಡಿದ್ದಾರೆ ಎಂಬ ಅವರ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರ ವಿರುದ್ಧ ಬಿಲ್ಲವ ಸಮಾಜದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಮೂಡುಬಿದಿರೆ ಬಿಲ್ಲವ ಸಂಘವು ಜಗದೀಶ್ ಅಧಿಕಾರಿ ವಿರುದ್ಧ ಮೂಡುಬಿದಿರೆ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.