

ಕಡಬ ಬಿಳಿನೆಲೆ ಗ್ರಾಮದ ಕೈಕಂಬ ಸಮೀಪದ ಕೋಟೆಸಾರು ಹೊಳೆಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿದೆ.
ಮೃತದೇಹದ ಸಮೀಪ ಮಹಿಳೆ ಧರಿಸಿದ ಪಾದರಕ್ಷೆ ಹಾಗೂ ಕೈಯಲ್ಲಿ ಕನ್ನಡಕ ಇದ್ದು, ಮೃತರು ಇಂದು ಬೆಳಿಗ್ಗೆ ಹೊಳೆಗೆ ಇಳಿದ ವೇಳೆ ಆಕಸ್ಮಿಕ ವಾಗಿ ಕಾಲು ಜಾರಿ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ. ಮಾಹಿತಿ ತಳಿದು ಸ್ಥಳಕ್ಕೆ ತೆರಳಿದ ಕಡಬ ಠಾಣಾ ಎಸ್ಐ ರುಕ್ಮನಾಯ್ಕ್ ಅವರು ಸ್ವತಃ ನೀರಿಗೆ ಇಳಿದು ಊರವರ ಸಹಕಾರದೊಂದಿಗೆ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಮೃತದೇಹವನ್ನು ದೇರಳಕಟ್ಟೆ ಮೆಡಿಕಲ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.