Header Ads
Header Ads
Breaking News

“ಬಿಸಿ ರೋಡ್‌ನಲ್ಲಿ ನಡೆದ ತಲ್ವಾರ್ ಕಾಳಗದಲ್ಲೂ ನನ್ನ ಹೆಸರು ದುರ್ಬಳಕೆ” ರಮಾನಾಥ ರೈಆರೋಪ

ನಾನಾಗಲೀ, ಕಾಂಗ್ರೆಸ್ ಆಗಲೀ ಎಸ್‌ಡಿಪಿಐ ಜೊತೆಗೆ ಒಳಒಪ್ಪಂದ ಮಾಡಿಕೊಂಡಿಲ್ಲ. ಇದು ಸತ್ಯಕ್ಕೆ ದೂರವಾದ ಮಾತು. ನನ್ನ ವಿರುದ್ಧ ಬಿಜೆಪಿ ಈಗಲೂ ಅಪಪ್ರಚಾರ ಮಾಡುತ್ತಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.ಅವರು ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಬಿಜೆಪಿಯವರು ನನ್ನ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆ. ಚುನಾವಣೆ ವೇಳೆ ಬಿಜೆಪಿಯಿಂದ ನನ್ನ ವಿರುದ್ಧ ಕರಪತ್ರ ಹಂಚಿ ಅಪಪ್ರಚಾರ ಮಾಡುತ್ತಿದ್ದಾರೆ.

ಅಪಪ್ರಚಾರದಿಂದ ನನಗೆ ಚುನಾವಣೆಯಲಲಿ ಸೋಲು ಉಂಟಾಗಿದೆ ಎಂದರು.ಇನ್ನೂ ಹಾಡಹಗಲೇ ಬಿಸಿರೋಡ್‌ನಲ್ಲಿ ತಲ್ವಾರು ಕಾಳಗ ಪ್ರಕರಣದ ಬಗ್ಗೆ ಮಾತನಾಡಿದ ರೈ ಅವರು, ಈ ವಿಚಾರದಲ್ಲೂ ನನ್ನ ಹೆಸರು ದುರ್ಬಳಕೆ ಮಾಡಲಾಗಿದೆ. ತಲ್ವಾರು ಹಿಡಿದು ಹಲ್ಲೆ ಮಾಡಿದ ಸುರೇಂದ್ರ ನನ್ನ ಬಂಟನಲ್ಲ. ಸುಖಾಸುಮ್ಮನೆ ನನ್ನ ವಿರುದ್ಧ ಷಡ್ಯಂತ್ರ ನಡಿತ್ತೀದೆ ಎಂದರು.ಲೋಕಸಭಾ ಚುನಾವಣೆಗೆ ತಯಾರಿ ನಡೆಯುತ್ತಿದೆ. ದೇಶದ ಆರ್ಥಿಕವಾಗಿ ಅತಂತ್ರ ಸ್ಥಿತಿಯಲ್ಲಿದೆ. ಮುಂದಿನ ಚುನಾವಣೆಯಲ್ಲಿ ಉತ್ತರ ಕೊಡುವ ಸಮಯ ಬಂದಿದೆ. ಮಗದೊಮ್ಮೆ ಕಾಂಗ್ರೆಸ್ ಕೇಂದ್ರದಲ್ಲಿ ಪುನರುತ್ಥಾನಗೊಳ್ಳಲಿದೆ ಎಂದು ಹೇಳಿದರು.ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಕೋಡಿಜಾಲ್ ಇಬ್ರಾಹಿಂ, ಮನಪಾ ಮೇಯರ್ ಭಾಸ್ಕರ ಮೊಯ್ಲಿ ಕೆ ಮತ್ತಿತರರ ಕಾಂಗ್ರೆಸ್ ಮುಖಂಡರು ಹಾಜರಿದ್ದರು.

Related posts

Leave a Reply