
ಬಂಟ್ವಾಳ: ಫೈಬರ್ ಕಲಾಕೃತಿಗಳ ಮೂಲಕ ಜಿಲ್ಲೆಯಾದ್ಯಂತ ಮನೆಮಾತಾಗಿರುವ ಕಲಾವಿದ ಮನೋಜ್ ಕನಪಾಡಿ ಅವರ ಕುಕ್ಕೆಶ್ರೀ ಆರ್ಟ್ಸ್ ಮತ್ತು ಫೈಬರ್ ಕ್ರಾಫ್ಟ್ಸ್ ಇದರ ನೂತನ ಕಚೇರಿ ಹಾಗೂ ವರ್ಕ್ಶಾಫ್ ಬಿ.ಸಿ.ರೋಡಿನ ತಪಲಾಡಿ ಸಿಟಿ ಕಾಂಪ್ಲೆಕ್ಸ್ನಲ್ಲಿ ಶುಭಾರಂಭಗೊಂಡಿತು.
ಬಿಲ್ಲವ ಸಮಾಜಸೇವಾ ಸಂಘದ ಅಧ್ಯಕ್ಷ, ಉದ್ಯಮಿ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ನೂತನ ಕಚೇರಿಯನ್ನು ದೀಪಬೆಳಗಿಸಿ ಉದ್ಘಾಟಿಸಿ ನೂತನ ಸಂಸ್ಥೆಗೆ ಶುಭ ಕೋರಿದರು.ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ, ತಾಲೂಕು ಪಂಚಾಯಿತಿ ಸದಸ್ಯ ಶಿವಪ್ರಸಾದ್ ಕನಪಾಡಿ, ಕಳ್ಳಿಗೆ ಗ್ರಾ.ಪಂ. ನಿಕಟಪೂರ್ವ ಉಪಾಧ್ಯಕ್ಷ ಪುರುಷ ಸಾಲ್ಯಾನ್ ನೆತ್ತರಕೆರೆ ಪ್ರಮುಖರಾದ, ಭುವನೇಶ್ ಪಚ್ಚಿನಡ್ಕ, ಸುದೀಪ್ ಕುಮಾರ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಶ್ರೀಶೈಲಾ, ಜಗದೀಶ್ ಕೊಯಿಲಾ, ಜನಾರ್ದನ ಸಾಲ್ಯಾನ್ ದರಿಬಾಗಿಲು, ಗಿರಿಧರ ಕೋಟ್ಯಾನ್ ಮಂಗಳೂರು, ಶಂಕರನಾರಾಯಣ ಹೊಳ್ಳ, ಜಗದೀಶ್ ಕಂಜತ್ತೂರು, ಓಮಯ್ಯ ಜೆ. ಕೋಟ್ಯಾನ್, ಶಿಕ್ಷಕಿ ಗೀತಾ, ದಿವಾಕರ ಪಂಬಂದಬೆಟ್ಟು, ಮನೋಜ್ ವಳವೂರು, ಉಮೆಶ್ ರೆಂಜೋಡಿ, ಶಶಿಧರ ಬ್ರಹ್ಮರಕೊಟ್ಲು ಮೊದಲಾದವರು ನೂತನ ಕಚೇರಿಗೆ ಭೇಟಿ ನೀಡಿ ಶುಭಹಾರೈಸಿದರು. ಮನೋಜ್ ಕನೋಪಾಡಿ ಅವರ ತಾಯಿ ಮೋಹಿನಿ, ಪತ್ನಿ ಸೌಮ್ಯ ಉಪಸ್ಥಿತರಿದ್ದರು.
ಮನೋಜ್ ಕನಪಾಡಿ ಅವರ ಕೈಚಳಕದಲ್ಲಿ ಮೂಡಿ ಬರುವ ಫೈಬರ್ ಕಲಾಕೃತಿಗಳು ನೈಜತೆಯ ಪ್ರತಿರೂಪ. ಬಾಲ್ಯದಿಂದಲೂ ಕಲೆಯಲ್ಲಿ ಆಸಕ್ತಿ ಮೈಗೂಡಿಸಿಕೊಂಡು ಇದೀಗ ಜಿಲ್ಲೆಯಲ್ಲಿಯೇ ಫೈಬರ್ ಕಲಾಕೃತಿಯಲ್ಲಿ ಖ್ಯಾತಿ ಗಳಿಸಿರುವ ಇವರ ಕಲಾಕೃತಿಗಳು ಅಪೂರ್ವವಾದುದು. ಮಹಾತ್ಮಗಾಂಧಿ, ಮಹರ್ಷಿ, ವಾಲ್ಮೀಕಿ, ಶಿವಾಜಿಯ ಪ್ರತಿಮೆ, ಕಂಬಳ ಕೋಣ, ಜೋಡಿ ಎತ್ತು, ಜಿಂಕೆ, ಜಿರಾಫೆ, ತಿರುಪತಿ ವೆಂಕಟೇಶ, ತಂಬೂರಿ, ಕಲ್ಲಂಗಡಿ ಮಾದರಿಯ ಬಾವಿಕಟ್ಟೆ ಹೀಗೆ ಬಗೆಬಗೆಯ ಕಲಾಕೃತಿಗಳು ಜನಾಕರ್ಷಣೆ ಪಡೆದಿರುವುದಲ್ಲದೆ ನೈಜತೆಗೆ ಹತ್ತಿರವಾಗಿದೆ. ಮನೆ, ಹೊಟೇಲ್, ರೆಸಾರ್ಟ್ಗಳಲ್ಲಿನ ಉದ್ಯಾನವನಗಳ ಅಂದ ಹೆಚ್ಚಿಸಿರುವ ಇವರ ಕಲಾಕೃತಿಗಳು ಕಲಾಸಕ್ತರ ಗಮನ ಸೆಳೆದಿದೆ. ಇದರ ಜೊತೆಗೆ ಫೈಬರ್ ಮೋಲ್ಡ್ಗಳು, ಉದ್ಯಾನವನದ ಕಾರಂಜಿಗಳು, ಮನೆಯೊಳಗಿನ ಇಂಟೀರಿಯರ್ ಕಾರಂಜಿಗಳು, ಫೈಬರ್ ವಾಟರ್ಫಾಲ್ಸ್, ಸ್ಟೇಜ್ ಡೆಕರೋಷನ್, ಕ್ಲೇ ಮಾಡಲಿಂಗ್, ಸೈನ್ ಬೋರ್ಡ್, ಥರ್ಮಕೋಲ್ ಡಿಸೈನ್ ಹಾಗೂ ಎಲ್ಲಾರೀತಿಯ ಫೈಬರ್ ಪ್ರತಿಮೆಗಳನ್ನು ಹಾಗೂ ಕಲಾಕೃತಿಗಳನ್ನು ತಯಾರಿಸಿ ಕೊಡುತ್ತಾರೆ. ಜನರ ಅನುಕೂಲದ ದೃಷ್ಟಿಯಿಂದ ಇವರು ತನ್ನ ನೂತನ ಕಚೇರಿಯನ್ನು ತಲಪಾಡಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದ ಸಿಟಿ ಕಾಂಪ್ಲೆಕ್ಸ್ ನಲ್ಲಿ ಆರಂಭಿಸಿದ್ದಾರೆ. ಫೈಬರ್ ಕಲಾಕೃತಿಗಳು ಬೇಕಾದವರು ಇವರ ಕಚೇರಿ ಅಥವಾ ದೂರವಾಣಿ ಸಂಖ್ಯೆ 9740290978 ಸಂಪರ್ಕಿಸಬಹುದಾಗಿದೆ.