Header Ads
Header Ads
Breaking News

ಬಿ.ಸಿ.ರೋಡು ಹಿಂದೂ ಧಾರ್ಮಿಕ ಸೇವಾ ಸಮಿತಿ ವತಿಯಿಂದ 40ನೇ ವರ್ಷದ ಶ್ರೀ ವಿನಾಯಕನ ಶೋಭಾಯಾತ್ರೆ

ಬಂಟ್ವಾಳ: ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ.ಸಿ.ರೋಡು ಇದರ ಆಶ್ರಯದಲ್ಲಿ ಬಿ.ಸಿರೋಡಿನ ರಕ್ತೇಶ್ವರೀ ದೇವಿ ದೇವಸ್ಥಾನದ ವಠಾರದಲ್ಲಿ 4 ದಿನಗಳ ಕಾಲ ಪೂಜಿಸಲ್ಪಟ್ಟ 40ನೇ ವರ್ಷದ ಶ್ರೀ ವಿನಾಯಕನ ಶೋಭಾಯಾತ್ರೆ ಮೆರವಣಿಗೆ ವಿಜ್ರಂಭಣೆಯಿಂದ ನಡೆಯಿತು.
ಚಿಲಿಪಿಲಿ ಗೊಂಬೆ ಬಳಗ, ಚೆಂಡೆ ಬ್ಯಾಂಡ್ ವಾದನ ಸಹಿತ ವಿವಿಧ ಸಂಘ ಸಂಸ್ಥೆಗಳ ಪ್ರಾಯೋಜಕತ್ವದ ಸ್ತಬ್ದ ಚಿತ್ರಗಳು, ಸುಡುಮದ್ದು ಪ್ರದರ್ಶನ ಶೋಭಾಯಾತ್ರೆ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು.

ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಬಿ.ಸಿ.ರೋಡು ರಕ್ತೇಶ್ವರಿ ದೇವಸ್ಥಾನದ ಬಳಿಯಿಂದ ಹೊರಟ ಶ್ರೀ ಗಣೇಶನ ಶೋಭಾಯಾತ್ರೆ ಮೆರವಣಿಗೆ ಕೈಕಂಬ, ತಲಪಾಡಿ, ಗಣಪತಿ ಕಟ್ಟೆಯವರೆಗೆ ಹೋಗಿ ಅಲ್ಲಿಂದ ಮೊಡಂಕಾಪು, ಬಿ.ಸಿ.ರೋಡು, ಮಯ್ಯರಬೈಲು ಭಂಡಾರಿಬೆಟ್ಟು ಬಂಟ್ವಾಳ ನೆರೆ ವಿಮೋಚನಾ ರಸ್ತೆಯಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಬಳಿ ನೇತ್ರಾವತಿ ನದಿಯಲ್ಲಿ ಜಲಸ್ತಂಭನ ಗೊಳಿಸಲಾಯಿತು.

Related posts

Leave a Reply

Your email address will not be published. Required fields are marked *