Header Ads
Breaking News

ಬಿ.ಸಿ ರೋಡ್‌ನಲ್ಲಿರುವ ಅಪೂರ್ವ ಜ್ಯುವೆಲ್ಲರ್‍ಸ್ ನಲ್ಲಿ ಅಕ್ಷಯ ತೃತೀಯ ಸಂಭ್ರಮ

ಬಂಟ್ವಾಳ: ಬಿ.ಸಿ.ರೋಡಿನ ಹೆಸರಾಂತ ಚಿನ್ನಾಭರಣ ಮಳಿಗೆ ಅಪೂರ್ವ ಜ್ಯುವೆಲ್ಲರ್‍ಸ್‌ನಲ್ಲಿ ಅಕ್ಷಯ ತೃತೀಯದ ಪ್ರಯುಕ್ತ ವಿಶೇಷ ಮಾರಾಟ ಮಂಗಳವಾರ ನಡೆಯಿತು. ಈ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಮಳಿಗೆಗೆ ಭೇಟಿ ನೀಡಿ ಚಿನ್ನಾಭರಣ ಖರೀಸಿದರು.

ಬಿ.ಸಿ.ರೋಡಿನ ಕೃಷ್ಣ ಹೆರಿಟೇಜ್ ಬಿಲ್ಡಿಂಗ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಪೂರ್ವ ಜ್ಯುವೆಲ್ಲರ್‍ಸ್ ಕಡಿಮೆ ಅವಧಿಯಲ್ಲಿ ಗ್ರಾಹಕರ ವಿಶ್ವಾಸಗಳಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ವಿನೂತನ ಮಾದರಿಯ, ಆಕರ್ಷಕ ವಿನ್ಯಾಸದ ಚಿನ್ನಾಭರಣಗಳು ಅಪೂರ್ವ ಜ್ಯುವೆಲ್ಲರ್‍ಸ್‌ನಲ್ಲಿ ಲಭ್ಯವಿದ್ದು ಸಂಸ್ಥೆಯ ನಗುಮೊಗದ ಸೇವೆಯಿಂದಾಗಿ ಬಿ.ಸಿ.ರೋಡು ಪರಿಸರದಲ್ಲಿ ಮನೆಮಾತಾಗಿದೆ. ಅಪೂರ್ವ ಜ್ಯವೆಲ್ಲರ್‍ಸ್‌ನ ಚಿನ್ನಾಭರಣಗಳು ಬಿಎಸ್‌ಐ ಹಾಲ್ ಮಾರ್ಕ್ ಜ್ಯುವೆಲ್ಲರಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಗ್ರಾಹಕರು ಚಿನ್ನಾಭರಣಗಳನ್ನು ನೇರ ಬೆಲೆಯಲ್ಲಿ ಖರೀದಿಸಲು ಮುಕ್ತ ಅವಕಾಶವಿರುವುದು ಈ ಮಳಿಗೆಯ ವೈಶಿಷ್ಟ್ಯತೆಯಾಗಿದೆ. ಆರಂಭಗೊಂಡ ಕಡಿಮೆ ಅವಧಿಯಲ್ಲಿಯೇ ಜನಮನ್ನಣೆಗೆ ಪಾತ್ರವಾಗಿದ್ದು ಗ್ರಾಹಕರಿಗೆ ಪಾರದರ್ಶಕ ಹಾಗೂ ಗುಣಮಟ್ಟದ ಸೇವೆ ನೀಡುವುದು ಸಂಸ್ಥೆಯ ಗುರಿಯಾಗಿದೆ. ಪ್ರತಿವರ್ಷ ಅಕ್ಷಯ ತೃತೀಯದ ಪ್ರಯುಕ್ತ ವಿನೂತನ ಮಾದರಿಯ ಚಿನ್ನಾಭರಣಗಳ ಮಾರಾಟದ ಮೂಲಕ ಗಮನ ಸೆಳೆಯತ್ತಿದೆ.

Related posts

Leave a Reply

Your email address will not be published. Required fields are marked *