Header Ads
Header Ads
Breaking News

ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರಾ ಅಧ್ಯಕ್ಷತೆಯಲ್ಲಿ ಬಿ.ಸಿ ರೋಡ್‌ನಲ್ಲಿ ನಡೆದ ತಾಲೂಕು ಪಂಚಾಯತ್ ಸಾಮಾನ್ಯ ಸಭೆ

ಬಂಟ್ವಾಳ: ಸರಕಾರ ಬಡವರಿಗೆ ಉಚಿತವಾಗಿ ನೀಡುತ್ತಿದ್ದ ಅಕ್ಕಿಗೆ ದಂಡ ವಿಧಿಸುವ ಪ್ರವೃತ್ತಿ ಕರ್ನಾಟಕದಲ್ಲಿ ಇದೆ. ಅನ್ನಕ್ಕೆ ದಂಡ ಹಾಕುವ ಪ್ರಕ್ರಿಯೆ ವಿಶ್ವದಲ್ಲಿಯೇ ಇದೇ ಮೊದಲು ಎಂದು ಮಂಗಳೂರು ಶಾಸಕ ಯು.ಟಿ.ಖಾದರ್ ಟೀಕಿಸಿದ್ದಾರೆ.ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರಾ ಅಧ್ಯಕ್ಷತೆಯಲ್ಲಿ ಬಿ.ಸಿ.ರೋಡಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾ.ಪಂ.ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅಧಿಕಾರಿಗಳಿಂದ ಅವರು ಮಾಹಿತಿ ಪಡೆದುಕೊಂಡರು. ವ್ಯಕ್ತಿಯೊಬ್ಬ ಬಿಪಿಎಲ್ ಕಾರ್ಡ್ ಪಡೆಯಲು ಇರುವ ಮಾನದಂಡವೇನು? ಅನರ್ಹ ಪಡಿತರ ಚೀಟಿದಾರರ ರದ್ದತಿಗೆ ಇರುವ ಮಾನದಂಡವೇನು? ಮೊದಲಾದ ಬಗ್ಗೆ ಆಹಾರ ಇಲಾಖೆಯ ಶಿರಸ್ತೆದಾರ್ ಅವರಿಂದ ಮಾಹಿತಿ ಪಡೆದ ಶಾಸಕರು ತಾನು ಆಹಾರ ಮತ್ತು ನಾಗರೀಕ ಪೂರೈಕೆ ಖಾತೆ ಇಲಾಖೆಯ ಸಚಿವನಾಗಿದ್ದಾಗ ಸಾಕಷ್ಟು ವಿರೋಧಗಳಿದ್ದರೂ ವಾರ್ಷಿಕ 1.20 ಲಕ್ಷ ಆದಾಯ ಇರುವ, ಜೀವನೋಪಾಯಕ್ಕಾಗಿ ನಾಲ್ಕು ಚಕ್ರದ ವಾಹನ ಇರುವ ಕುಟುಂಬವನ್ನು ಬಿಪಿಎಲ್ ಕುಟುಂಬದ ಪಟ್ಟಿಗೆ ಸೇರಿಸಲಾಗಿತ್ತು. ಆದರೆ ಇದೀಗ ಅನರ್ಹ ಪಡಿತರ ಚೀಟಿಯನ್ನು ರದ್ದುಪಡಿಸಬೇಕೆನ್ನುವ ಆದೇಶದಿಂದ ಸಾಕಷ್ಟು ಬಡವರಿಗೂ ತೊಂದರೆಯಾಗಿದೆ. ಇದರಿಂದಾಗಿ ಜನರು ಗೊಂದಲದಲ್ಲಿದ್ದಾರೆ. ಒಬ್ಬ ಕಳ್ಳನನ್ನು ಹಿಡಿಯಲು ಶೇ.95ರಷ್ಟು ಬಡವರಿಗೆ ತೊಂದರೆ ನೀಡಲಾಗುತ್ತಿದೆ. ತಾಲೂಕಿನಲ್ಲಿ ಜನರಿಗೆ ತಾರತಮ್ಯ ಆಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇದಕ್ಕೂ ಮುಂಚಿತವಾಗಿ ತಾ.ಪಂ.ನ ವಿಶೇಷ ಸಭೆಯಲ್ಲಿ ನಡೆದ ನಿರ್ಣಯಗಳನ್ನು ಸಾಮಾನ್ಯ ಸಭೆಯ ಅಜೆಂಡದಲ್ಲಿ ಉಲ್ಲೇಖಿಸದ ಬಗ್ಗೆ ಸದಸ್ಯರಾದ ಉಸ್ಮಾನ್ ಕರೋಪಾಡಿ ಹಾಗೂ ಸಂಜೀವ ಪೂಜಾರಿ ತಾ.ಪಂ. ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಣಾಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇರ್ವತ್ತೂರು ಗ್ರಾ.ಪಂ. ವ್ಯಾಪ್ತಿಯ ಮೇಲ್‌ಪತ್ತರ್ ಎಂಬಲ್ಲಿ ಅಂಗನವಾಡಿ ಕುಸಿಯವ ಹಂತದಲ್ಲಿದೆ ಎಂದು ಸದಸ್ಯ ರಮೇಶ್ ಕುಡ್ಮೇರ್ ಸಭೆಯ ಗಮನಕ್ಕೆ ತಂದರು.
ತಾಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರ ಅಧಿಕಾರವಧಿಯು ಮುಕ್ತಾಯವಾದ ಹಿನ್ನಲೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷೆಯಾಗಿ ಮಲ್ಲಿಕಾಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷ ಅಬ್ಬಾಸ್‌ಅಲಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿ.ಪಂ.ಸದಸ್ಯೆ ಕಮಲಾಕ್ಷಿ, ತಾ.ಪಂ.ಸದಸ್ಯರಾದ, ಉಸ್ಮಾನ್ ಕರೋಪಾಡಿ, ಧನಲಕ್ಷ್ಮಿ ಸಿ. ಬಂಗೇರ, ಹೈದರ್‌ಕೈರಂಗಳ, ಸಂಜೀವ ಪೂಜಾರಿ, ಪ್ರಭಾಕರ ಪ್ರಭು, ರಮೇಶ್ ಕುಡ್ಮೇರು, ಯಶವಂತ ಪೂಜಾರಿ, ಗಣೇಶ್ ಸುವರ್ಣ ವಿವಿಧ ಚರ್ಚೆಯಲ್ಲಿ ಪಾಲ್ಗೊಂಡರು.

Related posts

Leave a Reply

Your email address will not be published. Required fields are marked *