Header Ads
Header Ads
Breaking News

ಬಿ.ಸಿ ರೋಡ್‌ನಿಂದ ಪೊಳಲಿ ಸಂಪರ್ಕಿಸುವ ರಸ್ತೆಯಲ್ಲಿ ಬಿರುಕು

ಬಂಟ್ವಾಳ: ಬಿ.ಸಿ.ರೋಡಿನಿಂದ ಪೊಳಲಿ ಸಂಪರ್ಕಿಸುವ ರಸ್ತೆಯ ಕಲ್ಪನೆಯ ಏರು ರಸ್ತೆಯ ಬಳಿ ರಸ್ತೆಯಲ್ಲಿ ಬಿರುಕು ಕಾಣಿಸಿದೆ. ಡಾಮಾರು ಸೀಳಿ ಹೋಗಿದ್ದು ಗುಡ್ಡ ಕುಸಿಯುವ ಅಪಾಯ ಕಂಡು ಬಂದಿದೆ.
ಪಚ್ಚಿನಡ್ಕದಿಂದ ಕಲ್ಪನೆಗೆ ಹೋಗುವ ರಸ್ತೆಯ ಒಂದು ಪಾರ್ಶದಲ್ಲಿ ಗುಡ್ಡವಿದ್ದು, ಇನ್ನೊಂದು ಭಾಗ ಇಳಿಜಾರಾಗಿದೆ. ಇತ್ತೀಚಿನ ಭಾರಿ ಮಳೆಗೆ ಗುಡ್ಡಪ್ರದೇಶ ಮೆದುಗೊಂಡು ಭೂಮಿ ಸೀಳಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಲ್ಲದೆ ಇದರ ಪಕ್ಕದ ಗುಡ್ಡ ಮಣ್ಣಗಳು ಅಲ್ಲಲ್ಲಿ ಕುಸಿದು ಬಿದ್ದಿದೆ. ಈ ಹಿಂದೊಮ್ಮೆ ಇಲ್ಲಿ ಗುಡ್ಡ ಕುಸಿತ ಉಂಟಾಗಿದ್ದು ವಾಹನ ಸವಾರರ ಎಚ್ಚರವಹಿಸುವುದು ಅಗತ್ಯ.

Related posts

Leave a Reply

Your email address will not be published. Required fields are marked *