Header Ads
Header Ads
Breaking News

ಬಿ.ಸಿ. ರೋಡ್‌ನ ಮಿನಿ ವಿಧಾನ ಸೌಧದ ಕೇಂದ್ರದಲ್ಲಿ ಆಧಾರ್ ತಿದ್ದುಪಡಿ : ಸಾವಿರಾರು ಸಂಖ್ಯೆಯಲ್ಲಿ ಟೋಕನ್ ಪಡೆದ ಜನತೆ

ಆಧಾರ್ ಕಾರ್ಡ್ ಹಾಗೂ ಆಧಾರ್ ತಿದ್ದುಪಡಿಗಾಗಿ ಟೋಕನ್ ವಿತರಣೆ ಬಿ.ಸಿ.ರೋಡಿನ ಮಿನಿ ವಿಧಾನ ಸೌಧದ ಅಟಲ್ ಜೀ ಜನಸ್ನೇಹಿ ಕೆಂದ್ರದಲ್ಲಿ ನಡೆದಿದ್ದು ಇಂದು ಸಾವಿರಾರು ಸಂಖ್ಯೆಯಲ್ಲಿ ಜನರು ಟೋಕನ್ ಪಡೆದುಕೊಂಡರು.ಬಂಟ್ವಾಳ ಹೋಬಳಿಯ ಜನರಿಗೆ ಮಾತ್ರ ಟೋಕನ್ ವಿತರಿಸಲಾಗಿದ್ದು ಮುಂಜಾನೆ 6 ಗಂಟೆಯಿಂದಲೇ ಜನರು ಆಧಾರ್ ಟೋಕಾನ್‌ಗಾಗಿ ಸರತಿಯಲ್ಲಿ ನಿಂತಿದರು. ಇದರಿಂದಾಗಿ ಮಿನಿ ವಿಧಾನ ಸಔಧದ ಆವರಣದಲ್ಲಿ ಮೈಲುದ್ದದ ಕ್ಯೂ ಕಂಡು ಬಂತು. ಬೆಳಿಗ್ಗೆ 8ಗಂಟೆಯಿಂದ ಮಿನಿ ವಿಧಾನಸೌಧದ ಸಿಬ್ಬಂದಿಗಳು ಟೋಕನ್ ವತರಿಸಲು ಆರಂಭಿಸಿದ್ದು, 10 ಗಂಟೆಯ ವೇಳೆಗೆ ಸುಮಾರು700 ಮಂದಿಗೆ ಟೋಕನ್ ವಿತರಿಸಲಾಗಿದೆ. ಆ ಬಳಿಕವೂ ಮಿನಿ ವಿಧಾನಸೌಧದ ಹೊರಭಾಗದಲ್ಲಿ ಮೈಲುದ್ದದ ಸರತಿ ಸಾಲು ಕಂಡು ಬಂದ ಹಿನ್ನಲೆಯಲ್ಲಿ 10೦ ಗಂಟೆಯ ವರಗೆ ಸರತಿಯಲ್ಲಿ ನಿಂತವರಿಗೆ ಮಾತ್ರ ಟೋಕನ್ ವಿತರಿಸಲಾಯಿತು. ಇದರಿಂದಾಗಿ ಆ ಬಳಿಕ ಬಂದ ಅನೇಕರು ಟೋಕನ್ ಪಡೆಯದೆ ವಾಪಸ್ಸಾಗಬೇಕಾಯಿತು.
ಬಂಟ್ವಾಳ ಹೋಬಳಿಯವರಿಗೆ ಮಾತ್ರ ಗುರುವಾರ ಆಧಾರ್ ಟೋಕನ್ ನೀಡುವುದಾಗಿ ತಿಳಿಸಲಾಗಿದ್ದು ಬೆಳಗ್ಗಿನಿಂದಲೇ ಟೋಕನ್ ವಿತರಣೆ ಕಾರ್ಯ ನಡೆಸಲಾಗಿದೆ. ಬೆಳಿಗ್ಗೆ 10 ಗಂಟೆಯ ಒಳಗೆ ಸರತಿಯಲ್ಲಿ ನಿಂತವರಿಗೆಲ್ಲಾ ಟೋಕನ್ ನೀಡಲಾಗಿದೆ ಎಂದು ತಹಶೀಲ್ದಾರ್ ರಶ್ಮಿ ಎಸ್. ಆರ್ ತಿಳಿಸಿದರು.

Related posts

Leave a Reply

Your email address will not be published. Required fields are marked *