
ಬಂಟ್ವಾಳ: ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಕಳಿಯ ಬೀಡು ಎಂಬಲ್ಲಿ 8 ದಲಿತ ಕುಟುಂಬಗಳು ಟರ್ಪಾಲ್ ಹಾಸಿದ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. 80 ವರ್ಷ ಪ್ರಾಯದ ವೃದ್ದರು, ಸಣ್ಣ ಮಕ್ಕಳು ಈ ಮನೆಯಲ್ಲಿ ವಾಸವಿದ್ದು ಮಳೆ ಬಿಸಿಲಿಗೆ ಹೇಗೆ ಬದುಕಬೇಕು? ದ.ಕ. ಜಿಲ್ಲಾ ಪೊಲೀಸ್ ವತಿಯಿಂದ ಬಿ.ಸಿ.ರೋಡಿನ ರೋಟರಿ ಸಭಾಭವನದಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ ಎಸ್ಸಿಎಸ್ಟಿ ಕುಂದು ಕೊರತೆ ನಿವಾರಣಾ ಸಭೆಯಲ್ಲಿ ದಲಿತ ಮುಖಂಡ ಬೆಳ್ತಂಗಡಿಯ ಶೇಖರ್ ಪೊಲೀಸ್ ಅಧಿಕಾರಿಗಳನ್ನು ಈ ರೀತಿ ಪ್ರಶ್ನೆ ಮಾಡಿದರು.