Header Ads
Header Ads
Header Ads
Breaking News

ಬುದ್ಧಿ ಜೀವಿಗಳು ಎಸೆಯುವ ಕಸ ಹೆಕ್ಕಲು ಮುಗ್ಧ ಶಾಲಾ ಪುಟಾಣಿಗಳ ಬಳಕೆ : ಹೆಜಮಾಡಿ ನಾಗರಿಕ ಸಮಿತಿ ಅಧ್ಯಕ್ಷ ಶೇಖರ್ ಹೆಜಮಾಡಿ ಆಕ್ರೋಶ

ಮೋಜು-ಮಸ್ತಿ ನಡೆಸಲು ಸಮುದ್ರ ತೀರಕ್ಕೆ ಬರುವ ಬುದ್ಧಿ ಜೀವಿಗಳು ಊಪಯೋಗಿಸಿ ಎಸೆಯುವ ಮದ್ಯದ ಬಾಟಲ್ ಸಹಿತ ವಿವಿಧ ತ್ಯಾಜ್ಯಗಳನ್ನು ಹೆಕ್ಕಿ ಸಮುದ್ರ ತೀರ ಸ್ವಚ್ಚಗೊಳಿಸಲು ಇಕ್ಕೋ ಕ್ಲಬ್ ಹೆಸರಲ್ಲಿ ಶಾಲಾ ಪುಟಾಣಿಗಳನ್ನು ಬಳಕೆ ಮಾಡುವುದು ಸರಿಯಲ್ಲ, ಇದನ್ನು ಮುಂದುವರಿಸಿದ್ದಲ್ಲಿ ಇದರ ವಿರುದ್ಧ ಪ್ರತಿಭಟಿಸುವುದಾಗಿ ಹೆಜಮಾಡಿ ನಾಗರಿಕ ಸಮಿತಿ ಅಧ್ಯಕ್ಷರೂ ದಲಿತ ಮುಖಂಡರೂ ಆದ ಶೇಖರ್ ಹೆಜಮಾಡಿ ಎಚ್ಚರಿಸಿದ್ದಾರೆ.

ಪ್ರವಾಸೋದ್ಯಮ ಇಲಾಖೆ ಸಹಿತ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಹೆಜಮಾಡಿ ಪ್ರದೇಶದಲ್ಲಿ ಸ್ವಚ್ಚತಾ ಕಾರ್ಯಕ್ರಮದ ಉದ್ಘಾಟನೆ ನಡೆದಿದ್ದು, ವಿಳಂಬವಾಗಿ ಆರಂಭಿಸಿದ ಕಾರ್ಯಕ್ರಮ ಉದ್ಘಾಟಕರಾದ ಶಾಸಕ ಲಾಲಾಜಿ ಸಹಿತ ಇತರೆ ಅಥಿತಿಗಳ ಉದ್ದುದ್ದ ಬಾಷಣ ಮುಗಿಯುವಾಗಲೇ ಹನ್ನೊಂದು, ಫಲಹಾರ ಮುಗಿಸಿ 11-30ರ ಉರಿ ಬಿಸಿಲಿಗೆ ಮಕ್ಕಳಿಂದ ಸ್ವಚ್ಚತಾ ಕಾರ್ಯ ಆರಂಭಿಸಲಾಯಿತು, ಫೋಟೋಗಳಿಗೆ ಪೋಸ್ ನೀಡಿ ಅಥಿತಿಗಳು ಮರೆಯಾಗಿದ್ದಾರೆ. ಮಕ್ಕಳಿಗೆ ಸ್ವಚ್ಚತೆಯ ಬಗ್ಗೆ ತಿಳಿ ಹೇಳುವ ಕಾರ್ಯಕ್ರಮ ಇದಾಗಿದೆ ಎನ್ನುವ ಸಂಘಟಕರು, ಈ ಕಾರ್ಯಕ್ರಮದ ಬ್ಯಾನರ್ ಪ್ಲಾಸ್ಟಿಕ್‍ನದ್ದಾಗಿದೆ, ತ್ಯಾಜ್ಯ ಸಂಗ್ರಹಿಸಲು ಪ್ಲಾಸ್ಟಿಕ್ ಚೀಲಗಳು, ಅಥಿತಿಗಳಿಗೆ ನೀಡಿದ ಹೂ ಗುಚ್ಚಕ್ಕೆ ಪಾಸ್ಟಿಕ್ ಬಳಕೆ, ಎಲ್ಲಾವೂ ನಿಷೇಧಿತ ಪಾಸ್ಟಿಕ್‍ನಿಂದಲೇ ಮಾಡಿರುವಾಗ ಮಕ್ಕಳು ಈ ಕಾರ್ಯಕ್ರಮದಿಂದ ಅದೇನು ಪ್ರಯೋಜನ ಪಡೆದಾರು ಎಂಬುದಾಗಿ ಪ್ರಶ್ನಿಸುತ್ತಾರೆ. ಇಂಥಹ ಸ್ಚಚ್ಚತಾ ಕಾರ್ಯವನ್ನು ಶಾಸಕರ ಶಿಫಾರಸಿನ ಮೇರೆಗೆ ಪ್ರಶಸ್ತಿಗಳನ್ನು ಪಡೆಯುವ ಸಂಘ-ಸಂಸ್ಥೆಗಳ ಸದಸ್ಯರು ನಡೆಸಲಿ ಅದುಬಿಟ್ಟು ಈ ಪುಟಾಣಿಗಳ ಬಳಕೆಯನ್ನು ತಕ್ಷಣವೇ ನಿಲ್ಲಿಸಬೇಕು ತಪ್ಪಿದ್ದಲ್ಲಿ ಹೋರಾಟ ಅನಿರ್ವಾಯ ಎಂಬುದಾಗಿ ಎಚ್ಚರಿಸಿದ್ದಾರೆ.

Related posts

Leave a Reply

Your email address will not be published. Required fields are marked *