Header Ads
Header Ads
Header Ads
Breaking News

ಬುಲ್‍ಟ್ರಾಲ್, ಲೈಟ್ ಫಿಶಿಂಗ್ ಮೀನುಗಾರಿಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮ : ಕಡಲಿಗೆ ಇಳಿದ ಅಧಿಕಾರಿಗಳು ಮತ್ತು ಪೊಲೀಸರು

ಸಮುದ್ರದಲ್ಲಿ ಲೈಟ್‍ಫಿಶಿಂಗ್, ಬುಲ್‍ಟ್ರಾಲ್, ಸಣ್ಣ ಕಣ್ಣಿನ ಬಲೆ ಬಳಕೆ ಮೊದಲಾದ ಅಕ್ರಮ ಮೀನುಗಾರಿಕೆ ತಡೆಯುವುದಕ್ಕೆ ಇದೀಗ ಮೀನುಗಾರಿಕಾ ಇಲಾಖೆ ವಿಶೇಷ ಕಾರ್ಯಾಚರಣೆ ಆರಂಭಿಸಿದೆ.ಲೈಟ್‍ಫಿಶಿಂಗ್ ಮತ್ತು ಬುಲ್‍ಟ್ರಾಲ್ ಮೀನುಗಾರಿಕೆ ದೇಶದಲ್ಲೇ ಕರಾವಳಿಯಲ್ಲಿ ಮೀತಿಮೀರಿದೆ. ಈ ಕುರಿತು ಮೀನುಗಾರರ ಸಂಘಟನೆಗಳು ನಿರಂತರ ದೂರು ನೀಡುತ್ತಿವೆ. ಈ ನಡುವೆ ಮಂಗಳೂರು ಭಾಗದಲ್ಲಿ ಕೆಲವು ಬೋಟ್‍ಗಳ ನಡುವೆ ಸಂಘರ್ಷ ಉಂಟಾಗಿರುವ ಹಿನ್ನೆಲೆಯಲ್ಲಿ ಇಲಾಖೆ ಮೂರು ತಂಡಗಳನ್ನು ರಚಿಸಿ ಕಾರ್ಯಾಚರಣೆಗಿಳಿದಿದ್ದು ಕೆಎಸ್‍ಆರ್‍ಪಿ ಪೊಲೀಸರ  ನೆರವನ್ನು ಪಡೆಯಲಾಗಿದೆ.

“ಪರ್ಸಿನ್ ಬೋಟ್‍ನವರ ಲೈಟ್‍ಫಿಶಿಂಗ್‍ನಿಂದಾಗಿ ಮೀನು ಸಂತತಿ ನಶಿಸಿ ಇತರ ಮೀನುಗಾರರಿಗೆ ಮೀನುಗಳೇ ಲಭ್ಯವಾಗುತ್ತಿಲ್ಲ’ ಎಂಬುದು ಟ್ರಾಲ್‍ಬೋಟ್ ಹಾಗೂ ನಾಡದೋಣಿಯವರ ದೂರು. “ಟ್ರಾಲ್‍ಬೋಟ್‍ನವರು ಬುಲ್‍ಟ್ರಾಲ್ ಮಾಡಿ ಅಕ್ರಮವೆಸಗುತ್ತಿದ್ದಾರೆ’ ಎಂಬುದು ಪರ್ಸಿನ್ ಬೋಟ್‍ನವರ ದೂರು. ಸಣ್ಣ ಕಣ್ಣಿನ ಬಲೆಗಳನ್ನು (35 ಎಂಎಂಗಿಂತ ಕಡಿಮೆ) ಉಪಯೋಗಿಸಲಾಗುತ್ತಿದೆ. ಇದರಿಂದಾಗಿ ಅತೀ ಸಣ್ಣ ಮೀನುಗಳು ಕೂಡ ಬಲೆಗೆ ಬಿದ್ದು ಮತ್ಸ್ವಕ್ಷಾಮವಾಗುತ್ತಿದೆ ಎನ್ನಲಾಗಿದೆ.
ಮೂರು ದಿನಗಳಲ್ಲಿ 30ಕ್ಕೂ ಅಧಿಕ ಬೋಟ್‍ಗಳ ತಪಾಸಣೆ ನಡೆಸಲಾಗಿದ್ದು 8 ಬೋಟ್‍ಗಳು ಲೈಟ್ ಫಿಶಿಂಗ್ ನಡೆಸಿರುವುದು ಪತ್ತೆಯಾಗಿದೆ. 5 ಬೋಟ್‍ಗಳು ನಿಗದಿಗಿಂತ ಸಣ್ಣ ಕಣ್ಣಿನ ಬಲೆಗಳನ್ನು ಬಳಸಿ (10 ಎಂಎಂ, 20 ಎಂಎಂ) ಮೀನುಮರಿಗಳನ್ನು ಕೂಡ ಹಿಡಿಯುತ್ತಿರುವುದು ಗಮನಕ್ಕೆ ಬಂದಿದೆ. ಅಕ್ರಮ ಪತ್ತೆಯಾದ ಬೋಟ್‍ಗಳ ಮಾಲಕರಿಗೆ ನೋಟಿಸ್ ಕಳುಹಿಸಲಾಗಿದೆ.

ಮೀನಿನ ಕೊರತೆ ಹೆಚ್ಚಾದಂತೆ ಸಂಘರ್ಷ ಹೆಚ್ಚುತ್ತಿರುವುದು ಕಂಡುಬಂದಿದೆ. ಕಡಲು ಪ್ರಕ್ಷುಬ್ಧತೆಯಿಂದ ಒಂದೂವರೆ ತಿಂಗಳು ಮೀನುಗಾರಿಕೆಗೆ ತೆರಳಲು ಸಾಧ್ಯವಾಗಿಲ್ಲ. ಮೂರು ತಿಂಗಳಲ್ಲಿ ಸುಮಾರು 30 ದಿನ ನಷ್ಟವಾಗಿದ್ದು ಈ ವೇಳೆ ಪಸ್ಸೀನ್ ಬೋಟ್‍ನವರು ಲೈಟ್‍ಫಿಶಿಂಗ್ ಹೆಚ್ಚಿಸಿದ್ದಾರೆ. ಹೀಗಾಗಿ ಇಲಾಖೆ ಕಠಿನ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.

Related posts

Leave a Reply

Your email address will not be published. Required fields are marked *