Header Ads
Breaking News

ಬೆಲ್ಮದಲ್ಲಿ ಕ್ವಾರಂಟೈನ್ ದಾಖಲಾತಿ ಮಾಹಿತಿ ಕೇಂದ್ರ ಕಾರ್ಯಾರಂಭ

ಹೊರ ರಾಜ್ಯದಿಂದ ಆಗಮಿಸುವ ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಜನತೆಗೆ ಕ್ವಾರೆಂಟೈನ್ ವ್ಯವಸ್ಥೆಗೆ ಉಳ್ಳಾಲ ಹಾಗೂ ದೇರಳಕಟ್ಟೆ ಭಾಗದಲ್ಲಿ ಲಾಡ್ಜ್ ಮತ್ತು ವಸತಿ ನಿಲಯಗಳನ್ನು ನಿಗದಿಪಡಿಸಲಾಗಿದ್ದು, ಸೋಮವಾರದಿಂದ ಬೆಲ್ಮ ಗ್ರಾಮ ಪಂಚಾಯಿತಿಯಲ್ಲಿ ಮಾಹಿತಿ ಕೇಂದ್ರ ಕಾರ್ಯಾರಂಭಗೊಂಡಿದೆ.

ಶಾಸಕ ಯು.ಟಿ.ಖಾದರ್ ಅವರು ಕ್ಷೇತ್ರದ 10 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮಕರಣಿಕರ ಜೊತೆ ಚರ್ಚಿಸಿ ಸರ್ಕಾರಿ ಹಾಗೂ ಖಾಸಗಿ ಹಾಸ್ಟೆಲ್ ಗಳನ್ನು ಗುರುತಿಸಿದ್ದಾರೆ. ಇದಕ್ಕಾಗಿ ಬೆಲ್ಮ ಗ್ರಾಮ ಪಂಚಾಯಿತಿಯಲ್ಲಿ 24 ಗಂಟೆಗಳ ಮಾಹಿತಿ ಕೇಂದ್ರ ಆರಂಭಿಸಲಾಗಿದೆ. ರಾತ್ರಿ ವೇಳೆ ಮೂವರು ಸಿಬ್ಬಂದಿ ಹಾಗೂ ಓರ್ವ ಪೆÇಲೀಸ್ ಕರ್ತವ್ಯ ನಿರ್ವಹಿಸಲಿದ್ದಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನವೀನ್ ಹೆಗ್ಡೆ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಸ್ತ್ರೀಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಮಾಡಲಾಗಿದೆ. ಕ್ವಾರೆಂಟೈನ್ ಗೆ ಒಳಪಡುವ ವ್ಯಕ್ತಿ ಊಟದ ವ್ಯವಸ್ಥೆ ತನ್ನ ಮನೆಯಿಂದ ಅಥವಾ ಹೋಟೆಲ್ ನಿಂದ ತರಿಸಲು ಅವಕಾಶ ಕಲ್ಪಿಸಲಾಗಿದೆ.

Related posts

Leave a Reply

Your email address will not be published. Required fields are marked *