Breaking News

ಬೆಳ್ತಂಗಡಿಯಲ್ಲಿ ನಡೆದ ಜಾಗದ ವಿವಾದ ವೈರಲ್ ಆದ ವೀಡಿಯೋ, ಅತ್ತೆಯಿಂದ ಸೊಸೆ ಇಬ್ಬರು ಮಕ್ಕಳ ಮೇಲೆ ದೌರ್ಜನ್ಯ


ಜಾಗದ ವಿವಾದಕ್ಕೆ ಸಂಬಂಧಿಸಿ ಬೆಳ್ತಂಗಡಿ ತಾಲೂಕಿನ ರಾಧಮ್ಮ ಎಂಬವರು ತನ್ನ ಸೊಸೆ ಮತ್ತು ಇಬ್ಬರು ಮಕ್ಕಳ ಮೇಲೆ ದೌರ್ಜನ್ಯವೆಸಗುತ್ತಿರುವ ವಿಡಿಯೋ ವೈರಲ್ ಆಗಿದೆ.
ಕೊಯ್ಯೂರು ಗ್ರಾಮದ ನೆಕ್ಕರಕೋಡಿ ಎಂಬಲ್ಲಿ ಜಾಗಕ್ಕೆ ಬೇಲಿ ಹಾಕುವ ವಿಚಾರಕ್ಕೆ ಸಂಬಂಧಿಸಿ ತಾಯಿ ಹಾಗೂ ಮಗನ ನಡುವೆ ಗಲಾಟೆ ನಡೆದಿತ್ತು. ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಜಾಗಕ್ಕೆ ಬೇಲಿ ಹಾಕಲು ಮುಂದಾಗುವ ವೇಳೆ ಅದಕ್ಕೆ ತಡೆ ಒಡ್ಡಲಾಗಿತ್ತು. ತನ್ನ ಮಗನ ವಶದಲ್ಲಿರುವ ಜಾಗಕ್ಕೆ ಬೇಲಿ ಹಾಕಲು ತಂದೆ ತಾಯಿ ಮುಂದಾಗಿದ್ದರು ಎನ್ನಲಾಗಿದೆ. ಈ ವೇಳೆ ಜೆಸಿಬಿಗೆ ಅಡ್ಡಲಾಗಿ ಸೊಸೆ, ಇಬ್ಬರು ಎಳೆಯ ಮಕ್ಕಳು ನಿಂತಿದ್ದಾರೆ. ಒಂದು ವರ್ಷ ಪ್ರಾಯದ ಮಗುವನ್ನು ಎತ್ತಿಕೊಂಡು ಇನ್ನೊಂದು ಕೈಯಲ್ಲಿ ಮಗುವನ್ನು ಹಿಡಿದುಕೊಂಡು ನಿಂತಿದ್ದ ಮಹಿಳೆಯ ಬಳಿಗೆ ಹೋದ ಅತ್ತೆ ಮತ್ತು ನಾದಿನಿ ಕೈಯಲ್ಲಿ ಹಿಡಿದಿದ್ದ ಮಗುವನ್ನು ತಾಯಿಯಿಂದ ಕಿತ್ತೆಸೆಯಲು ಪ್ರಯತ್ನಿಸಿದ್ದಾರೆ. ಅಳುತ್ತಿದ್ದ ಮಗುವನ್ನು ಪಕ್ಕಕ್ಕೆ ದೂಡಿದ ಅವರು ಬಳಿಕ ಪುಟ್ಟ ಮಗುವನ್ನು ಎತ್ತಿಕೊಂಡು ನಿಂತಿದ್ದ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಅಳುತ್ತಿದ್ದ ಮಗುವಿನೊಂದಿಗೆ ಆಕೆಯನ್ನು ದೂಡಿ ಜೆಸಿಬಿ ಹೋಗಲು ಅನುವು ಮಾಡಿಕೊಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

Related posts

Leave a Reply