Header Ads
Breaking News

ಬೆಳ್ತಂಗಡಿಯಲ್ಲಿ ವ್ಯಸನ ಮುಕ್ತ ಸಾಧಕರ ಸಮಾವೇಶ

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ವತಿಯಿಂದ ವ್ಯಸನ ಮುಕ್ತ ಸಾಧಕರ ಸಮಾವೇಶ ಮತ್ತು ಶತ ದಿನೋತ್ಸವ ಕಾರ್ಯಕ್ರಮ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯರಾದ ಶ್ರೀಮತಿ ಶಶಿಕಲಾ ಜೊಲ್ಲೆ ಅಣ್ಣಾಸಾಹೇಬ್ ಮಾತನಾಡಿ ಇಡೀ ಜಗತ್ತಿನಲ್ಲಿ ಸಂಸ್ಕೃತಿ ಸಂಸ್ಕಾರ ಇರುವ ದೇಶ ಅಂದರೆ ಅದು ಭಾರತ ದೇಶ, ನಮ್ಮ ಜೀವನದಲ್ಲಿ ಎಷ್ಟು ವರ್ಷ ಬದುಕಿದ್ದೇವೆ ಅನ್ನುವುದು ಮುಖ್ಯವಲ್ಲ ನಾವು ಹೇಗೆ ಬದುಕಿದ್ದೇವೆ ಅನ್ನುವುದೇ ಮುಖ್ಯ, ಗಂಡ ಹೆಂಡತಿ ಮಕ್ಕಳು ಒಂದು ಮನೆಯಲ್ಲಿ ಅನ್ಯೋನ್ಯವಾಗಿದ್ದರೆ ಅದುವೇ ನಮಗೆ ಸ್ವರ್ಗ, ಆದ್ದರಿಂದ ಕುಡಿತದ ಚಟ ಇಲ್ಲದೆ ಇದ್ದರೆ ನಾವು ಸುಖ ಸಂಸಾರದ ಜೀವನ ನಡೆಸಬಹುದು ಎಂದರು, ಕೊನೆಗೆ ಹಾಡಿನ ಮೂಲಕ ಜನರಿಗೆ ತಿಳಿ ಹೇಳಿದರು.

ಆನಂತರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಅವರು ಮಾತನಾಡಿ, ಮದ್ಯಕ್ಕೆ ಒಳಗಾದವರು ಸ್ವಂತಿಕೆ ಮರೆಯುತ್ತಾರೆ. ಕುಡಿತದ ಆಸೆಗಾಗಿ ಕುಡಿತಕ್ಕೊಳಗಾದವರು ಇನ್ನೊಬ್ಬರ ಪ್ರಾಣ ತೆಗೆಯಲು ಮುಂದಾದಂತಹ ಘಟನೆಗಳೂ ಇವೆ. ದುಶ್ಚಟವೆಂಬುವುದು ಶಾಪವಾಗಿದೆ. ದುಶ್ಚಟಮುಕ್ತರಾಗಿ ತಮ್ಮ ಕುಟುಂಬವನ್ನು ಪವಿತ್ರ ಕುಟುಂಬವನ್ನಾಗಿ ಮಾಡಿ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಶಕರಾದ ಹರೀಶ್ ಪೂಂಜ. ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀಮತಿ ಕೆ. ರೋಹಿಣಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ ಟ ಎಲ್ ಹೆಚ್ ಮಂಜುನಾಥ್, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಶ್ರೀ ಕೆ. ವಸಂತ ಸಾಲ್ಯಾನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *