Header Ads
Breaking News

ಬೆಳ್ತಂಗಡಿಯ ಪುತ್ತಿಗೆಯಲ್ಲಿ ಸರಕಾರಿ ಜಾಗ ಅತಿಕ್ರಮಣ ವಿಚಾರ : ಸಾರ್ವಜನಿಕರ ದೂರಿನ ಮೇರೆಗೆ ಭೇಟಿ, ಪರಿಶೀಲನೆ

ಸರಕಾರಿ ಜಾಗವನ್ನು ಖಾಸಗಿ ವ್ಯಕ್ತಿಗಳು ಸ್ವಾಧೀನಪಡಿಸಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಸರ್ವೇ ನಂ 47/1 ಪಿ1ನ ಸರಕಾರಿ ಜಾಗವನ್ನು ಅತಿಕ್ರಮಣ ಮಾಡಿದ್ದಾರೆ. ಬೆಳ್ತಂಗಡಿ ತಾಲೂಕಿನ ತಹಶೀಲ್ದಾರರಾದ ಗಣಪತಿ ಶಾಸ್ತ್ರಿ ಯವರು ತೆರವುಗೊಳಿಸುವಂತೆ ಹಲವು ಭಾರಿ ಆದೇಶ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಸಾರ್ವಜನಿಕರು ಮತ್ತೆ ದೂರು ನೀಡಿದ ಹಿನ್ನಲೆಯಲ್ಲಿ ಸ್ಥಳಕ್ಕೆ ವಿಎ ವಿನಯ ಚಂದ್ರ ಪುತ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಶಾಂತ್ ಪೈ, ಹಾಗೂ ಪಂಚಾಯತ್ ವಿಎ ಆಗಮಿಸಿ ವೀಕ್ಷಿಸಿದರು. ನಂತರ ಮಾತನಾಡಿದ ವಿಎ ರವರು ನಾವು ಹಲವು ಭಾರಿ ನೋಟಿಸ್ ನೀಡಿದರೂ ಕೇಳಲಿಲ್ಲ ಆದ್ದರಿಂದ ನಾವು ಇದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

Related posts

Leave a Reply

Your email address will not be published. Required fields are marked *