Header Ads
Header Ads
Breaking News

ಬೆಳ್ತಂಗಡಿಯ ರಿಷಿ ಸಾಮಾಜಿಕ ಸಾಂಸೃತಿಕ ಪ್ರತಿಷ್ಠಾನ ವತಿಯಿಂದ ‘ರಿಷಿ ಹಸಿರು ಹಬ್ಬ’ ಕಾರ್ಯಕ್ರಮ

ಬೆಳ್ತಂಗಡಿಯ ರಿಷಿ ಸಾಮಾಜಿಕ ಸಾಂಸೃತಿಕ ಪ್ರತಿಷ್ಠಾನ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ‘ಹಚ್ಚ ಹಸಿರು ಸ್ವಚ್ಛ ಉಸಿರು’ ಪರಿಕಲ್ಪನೆಯೊಂದಿಗೆ ‘ರಿಷಿ ಹಸಿರು ಹಬ್ಬ’ ಕಾರ್ಯಕ್ರಮವು ಬೆಳ್ತಂಗಡಿ ತಾಲೂಕಿನ ಮೈರೋಳ್ತಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರ ಚಿದಾನಂದ ರಾವ್ ಕೊಲ್ಲಾಜೆ ಅವರುಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ ಅಧ್ಯಕ್ಷತೆ ವಹಿಸಿದರು.ತಾಲೂಕು ಪಂಚಾಯತ್ ಸದಸ್ಯ ಕೃಷಯ್ಯ ಆಚಾರ್ಯ, ಗ್ರಾ.ಪಂ ಅಧ್ಯಕ್ಷ ಉದಯ ಕುಮಾರ್ ಬಿ. ಕೆ, ಗ್ರಾ.ಪಂ. ಸದಸ್ಯ ಸೀತಾರಾಮ ಮಡಿವಾಳ ಶುಭ ಹಾರೈಸಿದರು. ಉಪವಲಯ ಅರಣ್ಯಾಧಿಕಾರಿ ಆರ್.ಎಸ್.ಪಾಟೀಲ್, ಅರಣ್ಯ ರಕ್ಷಕರಾದ ಜಗದೀಶ್, ನಿಂಗರಾಜು, ಗ್ರಾ.ಪಂ.ಸದಸ್ಯೆ ರೂಪ ವಿಶ್ವಕರ್ಮ, ರಿಷಿ ಸಾಮಾಜಿಕ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ದಿವಾಕರ್ ಪದ್ಮುಂಜ, ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಪದ್ಮುಂಜ ಕುಂಞ ಮೂಲ್ಯ,ಕೀರ್ತನಾ ಕುಲಾಲ್, ಆನಂದ ಪದ್ಮುಂಜ,ರೂಪ ಜೆ ಪಡ್ಪು, ಸಂದ್ಯಾ ಆನಂದ್, ಅವಿನಾಶ್ ಕುಲಾಲ್, ಪೃಥ್ವಿ ಜೆ ಪಡ್ಪು, ಶಾಲಾಭಿವೃದ್ಧಿ ಸಮಿತಿಯ ದಿನೇಶ್ ಖಂಡಿಗ ಹರಿಣಾಕ್ಷಿ, ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಪರಿಸರದಲ್ಲಿ ಮತ್ತು ಮಲೆಂಗಲ್ಲು ದೇವಸ್ಥಾನದ ಪರಿಸರದಲ್ಲಿ ಪ್ರತಿಷ್ಠಾನದ ಸದಸ್ಯರಿಂದ ಗಿಡ ನೆಡುವ ಮತ್ತು ಈ ಹಿಂದೆ ನೆಟ್ಟ ಗಿಡಗಳನ್ನು ಪೋಷಿಸುವ ಕೆಲಸ ನಡೆಯಿತು.

Related posts

Leave a Reply

Your email address will not be published. Required fields are marked *