Header Ads
Breaking News

ಬೆಳ್ತಂಗಡಿಯ ಹಳ್ಳಿಂಗೇರಿಯ ಶಾಲೆಯಲ್ಲಿ ಅಡಿಕೆ ತೋಟ

ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಹಳ್ಳಿಂಗೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೀಗ ಸುಮಾರು ನೂರು ಅಡಿಕೆಗಿಡಗಳ ತೋಟ ನಿರ್ಮಾಣವಾಗಿದೆ. ಯಾವುದೇ ಕೆಲಸಕ್ಕೂ ಮುಂದಡಿ ಇಡುವವರು, ಪ್ರೇರಣೆ ನೀಡುವವರು, ಸಹಕಾರ ನೀಡುವವರು ಎಲ್ಲವೂ ಇರಬೇಕಾಗುತ್ತದೆ. ಇದೆಲ್ಲವೂ ಮೇಳೈಸಿ ಇದೀಗ ಬೇರೆ ಬೇರೆ ರೀತಿಯಲ್ಲಿ ಈ ಶಾಲೆ ಮಾದರಿಯಾಗುವತ್ತ ಹೆಜ್ಜೆ ಇಡುತ್ತಿದೆ. ಅದೇ ರೀತಿಯಲ್ಲಿ ಶಾಲೆಯ ಖಾಲಿ ಇದ್ದ ಸ್ಥಳವನ್ನು ಶಾಲೆಗೆ ಆದಾಯದ ಮೂಲವನ್ನಾಗಿ ಮಾಡುವ ಯೋಚನೆ ಮಾಡಿ, ಯೋಜನೆ ರೂಪಿಸಲಾಗಿ ಇದೀಗ 100 ಅಡಿಕೆ ಗಿಡಗಳ ನಾಟಿ ಮಾಡಲಾಗಿದೆ. ಗಾಂಧಿಜಯಂತಿಯ ಈ ದಿನವನ್ನು ಇದಕ್ಕಾಗಿ ಆಯ್ಕೆ ಮಾಡಿ ಅರ್ಥಪೂರ್ಣವಾಗಿ ಗಾಂಧಿಜಯಂತಿ ಆಚರಿಸಿದರು.ಶಾಲಾ ಮುಖ್ಯೋಪಾಧ್ಯಾಯ ರಾದ ಶ್ರೀಧರ್,sಎಸ್‍ಡಿಎಮ್‍ಸಿ ಅಧ್ಯಕ್ಷರಾದ ಉಮರ್. ಹಾಗೂ ಮಕ್ಕಳ ಪೊಷಕರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *