Header Ads
Header Ads
Breaking News

ಬೆಳ್ಳಾರೆಯ ಪುಡ್ಕಜೆಯಲ್ಲಿ ರುದ್ರಭೂಮಿ ಸಮಸ್ಯೆ

ಬೆಳ್ಳಾರೆ ಗ್ರಾಮದ ಪುಡ್ಕಜೆ ಎಂಬಲ್ಲಿ ಹಿಂದೂ ರುದ್ರಭೂಮಿ ಮತ್ತು ರುದ್ರಭೂಮಿಗೆ ರಸ್ತೆ ಸಂಪರ್ಕ ನೀಡುವಂತೆ ಒತ್ತಾಯಿಸಿ ಅಂಬೇಡ್ಕರ್ ತತ್ವರಕ್ಷಣಾ ವೇದಿಕೆ ಕರ್ನಾಟಕ ಸಂಘನೆಯ ತಾಲೂಕು ಘಟಕದ ವತಿಯಿಂದ ಜೂ.೨೫ರಂದು ಉಗ್ರ ಪ್ರತಿಭಟನೆ ನಡೆಸುವುದಾಗಿ ವೇದಿಕೆ ತಿಳಿಸಿದೆ.ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ತಾಲೂಕು ಘಟಕದ ಅಧ್ಯಕ್ಷ ಸುಂದರ ಪಾಟಾಜೆ ಪುಡ್ಕಜೆಯಲ್ಲಿ ಹಿಂದೂ ರುದ್ರಭೂಮಿಗಾಗಿ ೧.೮೨ ಎಕ್ರೆ ಸ್ಥಳವನ್ನು ಗುರುತಿಸಲಾಗಿದೆ. ಆದರೆ ಕಂದಾಯ ಇಲಾಖೆ ಇದುವರೆಗೆ ಆ ಸ್ಥಳವನ್ನು ಮಂಜೂರು ಮಾಡದೇ ಇರುವುದರಿಂದ ಬೆಳ್ಳಾರೆ ಗ್ರಾಮಸ್ಥರು ಶವ ಸಂಸ್ಕಾರದ ಸಂದರ್ಭದಲ್ಲಿ ತುಂಬ ಸಮಸ್ಯೆ ಎದುರಿಸಬೇಕಾಗಿದೆ.

ಈ ರುದ್ರಭೂಮಿಯ ಸ್ಥಳಕ್ಕೆ ಹೋಗುವ ರಸ್ತೆಯನ್ನು ಸಹ ಸ್ಥಳೀಯ ವ್ಯಕ್ತಿಯೊಬ್ಬರು ಅನಧಿಕೃತವಾಗಿ ವಶಪಡಿಸಿಕೊಂಡು ರಸ್ತೆಗೆ ತಡೆ ಮಾಡುತ್ತಿದ್ದಾರೆ. ಈ ಸಮಸ್ಯೆಯನ್ನು ನಿವಾರಿಸಬೇಕೆಂದು ಜೂ.೧೧ರಂದು ವೇದಿಕೆಯ ಪದಾಧಿಕಾರಿಗಳು ಪುತ್ತೂರು ಉಪ ವಿಭಾಗಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಅವರು ೧೦ ದಿನದೊಳಗಾಗಿ ಸಮಸ್ಯೆ ಬಗ್ಗೆ ಹರಿಸುವುದಾಗಿ ಭರವಸೆ ನೀಡಿದ್ದು ಇದುವರೆಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಆದ್ದರಿಂದ ಜೂ.೨೫ರಂದು ಸುಳ್ಯದಲ್ಲಿ ಕಾಲ್ನಡಿಗೆ ಜಾಥಾ ನಡೆಸಿ ತಾಲೂಕು ಕಚೇರಿಯ ಮುಂಭಾಗದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಸಂಘಟನಾ ಕಾರ್ಯ ದರ್ಶಿ ಪರಮೇಶ್ವರ ಸದಸ್ಯರಾದ ಮಂಜುನಾಥ, ಕೂಸಪ್ಪ ಉಪಸ್ಥಿತರಿದ್ದರು.

Related posts

Leave a Reply