Header Ads
Breaking News

ಬೆಹರೈನ್‌ನಲ್ಲಿ ಮನರಂಜಿಸಿದ ’ವೀರ ಬಬ್ರುವಾಹನ’, ಸುದರ್ಶನೋಪಖ್ಯಾನ ಕನ್ನಡ ಪೌರಾಣಿಕ ಪ್ರಸಂಗಳು

ಬಹರೈನ್; ಇತ್ತೀಚೆಗೆ ಇಲ್ಲಿನ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸಂಘದ ಆಶ್ರಯದಲ್ಲಿ ದ್ವೀಪದ ಯಕ್ಷಗಾನ ಕಲಾವಿದರಿಂದ ಪ್ರದರ್ಶನಗಂಡ ವೀರ ಬಬ್ರುವಾಹನ ಹಾಗು ಸುದರ್ಶನೋಪಖ್ಯಾನ ಎಂಬ ಎರಡು ಅಮೋಘ ಕನ್ನಡ ಪೌರಾಣಿಕ ಪ್ರಸಂಗಳು ’ಸಗಯ್ಯಾ’ ಪರಿಸರದಲ್ಲಿರುವ ಕೇರಳ ಕೆಥೋಲಿಕ್ ಅಸೋಸಿಯೇಷನ್ ನ ಭವ್ಯ ಸಭಾಂಗಣದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡು ನೆರೆದ ಯಕ್ಷಪ್ರೇಮಿಗಳ ಮನಸೂರೆಗೊಂಡಿತು.
ಇಲ್ಲಿನ ಕನ್ನಡ ಸಂಘದ ಆಶ್ರಯದಲ್ಲಿ ಯಕ್ಷೋಪಾಸನ ಕೇಂದ್ರದ ಮೂಲಕ ನಾಡಿನ ಖ್ಯಾತ ಯಕ್ಷಗಾನ ಕಲಾವಿದ ದೀಪಕ್ ಪೇಜಾವರ ಇವರ ನಿರ್ದೇಶನದಲ್ಲಿ ಮೂಡಿ ಬಂದ ಈ ಯಕ್ಷಗಾನ ಪ್ರದರ್ಶನದಲ್ಲಿ ಅವರ ಯಕ್ಷೋಪಾಸನ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಬಾಲ ಕಲಾವಿದರು ರಂಗ ಪ್ರವೇಶ ಮಾಡಿ ,ತಮ್ಮ ಅಭಿನಯ,ವಾಕ್ಚಾತುರ್ಯ ಹಾಗು ಕುಣಿತದ ಮೂಲಕ ನೆರೆದ ಯಕ್ಷಪ್ರೇಮಿಗಳನ್ನು ಮಂತ್ರಮುಗ್ದರನ್ನಾಗಿಸಿದರು .

ಬಾಲಕ,ಬಾಲಕಿಯರು ಸೇರಿದಂತೆ ಇಲ್ಲೇ ಹೆಜ್ಜೆಗಾರಿಕೆ,ಅರ್ಥಗಾರಿಕೆ ಹಾಗು ಅಭಿನಯ ಕಲಿತ ಸುಮಾರು ಹತ್ತು ಬಾಲ ಕಲಾವಿದರಿಂದ ವೀರ ಬಬ್ರುವಾಹನ ಎಂಬ ಯಕ್ಷಗಾನ ಪ್ರದರ್ಶನವು ರಂಗದಲ್ಲಿ ಬಹಳ ಸುಂದರವಾಗಿ ಮೂಡಿಬಂತು. ನಾಡಿನ ಖ್ಯಾತ ಹಿಮ್ಮೇಳ ವಾದಕ ಶ್ರೀ ಶ್ರೀಧರ್ ವಿಟ್ಲಾ ರವರು ಈ ಯಕ್ಷಗಾನ ಪ್ರದರ್ಶನದಲ್ಲಿ ವಿಶೇಷವಾಗಿ ಭಾಗವಹಿಸಿ ಚೆಂಡೆಯಲ್ಲಿ ತಮ್ಮ ಕೈ ಚಳಕ ತೋರಿಸಿದರೆ . ಸೌದಿ ಅರೇಬಿಯಾದ ಹವ್ಯಾಸಿ ಭಾಗವತರಾದ ರೋಶನ್ ಕೋಟ್ಯಾನ್ ಹಾಗು ನಾರಾಯಣ ಪಂಜತೊಟ್ಟಿಯವರು ಭಾಗವತರಾಗಿ ತಮ್ಮ ಶುಶ್ರಾವ್ಯ ಕಂಠದಿಂದ ಮೋಡಿಮಾಡಿದರು, ದ್ವೀಪದ ಪ್ರತಿಭಾವಂತ ಕಲಾವಿದರುಗಳು ಈ ಯಕ್ಷಗಾನ ಪ್ರದರ್ಶನದಲ್ಲಿ ತಮ್ಮ ಪ್ರತಿಭೆ ಮೆರೆದು ದ್ವೀಪದ ಕಲಾಪ್ರೇಮಿ ಗಳನ್ನು ರಂಜಿಸಿದರು .

ಈ ಯಕ್ಷಗಾನ ಕಾರ್ಯಕ್ರಮದಲ್ಲಿ ಬಾಲಕಲಾವಿದರಿಂದ ಮೊದಲಿಗೆ ಗುರುವಂದನಾ ಕಾರ್ಯಕ್ರಮವು ಜರುಗಿತು. ಇದೆ ಸಂಧರ್ಭದಲ್ಲಿ ಅತಿಥಿ ಕಲಾವಿದರಾದ ಶ್ರೀ ಶ್ರೀಧರ್ ಹಾಗುಸ್ಥಳೀಯ ಕಲಾವಿದರುಗಳನ್ನು ಹಾಗು ಸ್ವಯಂಸೇವಕರುಗಳನ್ನು ಸಮ್ಮಾನಿಸಲಾಯಿತು .
ಈ ಸಂದರ್ಭ ರಾಮ್ ಪ್ರಸಾದ್ ಅಮ್ಮೆನಡ್ಕ, ಶ್ರೀ ಮೋಹನ್ ಎಡನೀರ್, ಶ್ರೀ ಪ್ರಸಾದ್ ರಾವ್ ಕಲಾವಿದ ಶ್ರೀ ದೀಪಕ್ ಪೇಜಾವರ, ಶ್ರೀ ರಮೇಶ್ ಮಂಜೆಶ್ವರ್, ಉಪಸ್ಥಿತರಿದ್ರು.

Related posts

Leave a Reply

Your email address will not be published. Required fields are marked *