Header Ads
Breaking News

ಬೇಲೂರಿನಲ್ಲಿ ಶಾಸಕ ಕೆಎಸ್ ಲಿಂಗೇಶ್ ಅವರಿಂದ ರಾಗಿ ಹಾಗೂ ಭತ್ತ ಖರೀದಿ ಕೇಂದ್ರಕ್ಕೆ ಚಾಲನೆ

ಬೇಲೂರು ತಾಲೂಕಿನಲ್ಲಿ ರಾಗಿ ಹಾಗೂ ಭತ್ತ ಖರೀದಿ ಕೇಂದ್ರಕ್ಕೆ ಶಾಸಕ ಕೆಎಸ್ ಲಿಂಗೇಶ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಈಗಾಗಲೇ 1037 ರೈತರು ಸುಮಾರು 25860 ಕ್ವಿಂಟಾಲ್ ರಾಗಿ ಖರೀದಿ ಮಾಡಲು ನೊಂದಣಿ ಮಾಡಿಕೊಂಡಿದ್ದು ಭತ್ತಕ್ಕೆ 99 ರೈತರು 3695 ಕ್ವಿಂಟಲ್ ಭತ್ತ ಖರೀದಿಸಲು ರೈತರು ಮುಂದಾಗಿದ್ದಾರೆ ಎಂದ್ರು.

ಎಪಿಎಂಸಿ ಅಧ್ಯಕ್ಷ ಸಿಹೆಚ್ ಮಹೇಶ್ ಮಾತನಾಡಿ ಈ ಬಾರಿ ವ್ಯಾಪಕವಾಗಿ ಮಳೆಯಿಂದ ತಾವು ಬೆಳೆದಂತ ಬೆಳೆಗಳು ಸಂಪೂರ್ಣ ನೆಲಕಚ್ಚಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಈಗ ಇರುವಷ್ಟು ಬೆಳೆ ಲಾಭತರದಿದ್ದರೂ ಅವರಿಗೆ ರಾಗಿ ಭತ್ತವನ್ನು ಯತೇಚ್ಚವಾಗಿ ನಮ್ಮ ತಾಲೂಕಿನಲ್ಲಿ ಬೆಳೆಯುವುದರಿಂದ ಎಪಿಎಂಸಿಯ ಹೊರಭಾಗದಲ್ಲಿ ಮಾರಾಟಕ್ಕೆ ಮುಂದಾದಾಗ ಹೆಚ್ಚು ನಷ್ಟವಾಗುತ್ತದೆ ಎಂದ್ರು.

ಈ ಸಂದರ್ಭದಲ್ಲಿ ಹೆಚ್‍ಡಿಸಿಸಿ ಬ್ಯಾಂಕ್ ನಿರ್ದೇಶಕ ಎ ನಾಗರಾಜ್, ಎಪಿಎಂಸಿ ಉಪಾಧ್ಯಕ್ಷೆ ಚಂದ್ರಕಲಾ, ನಿರ್ದೇಶಕರಾದ ಚೇತನ್, ಜಗದೀಶ್, ನಾಗರಾಜ್, ಕಾರ್ಯದರ್ಶಿ ಮಧು, ಲತೀಫ್, ಎಂಕೆ ಆರ್ ನಾಗೇಶ್, ರಮೇಶ್ ಕುಮಾರ್ ಮುಂತಾದವರು ಹಾಜರಿದ್ದರು.

Related posts

Leave a Reply

Your email address will not be published. Required fields are marked *