
ಬೇಲೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಲಸಿಕೆ ಹಾಕಲಾಯಿತು. ಕೋವೀಡ್ ಶೀಲ್ಡ್ ಪಡೆಯುವುದರಿಂದ ಯಾವುದೇ ಅಡ್ಡಪರಿಣಾಮವಿಲ್ಲದೆ ಪ್ರತಿಯೊಬ್ಬರೂ ಭಯಬಿಟ್ಟು ಲಸಿಕೆ ಪಡೆಯಬಹುದು ಎಂದು ತಹಶೀಲ್ದಾರ್ ಎನ್ ವಿ ನಟೇಶ್ ತಿಳಿಸಿದರು.
ಡಾ ನರಸೇಗೌಡ ಮಾತನಾಡಿ ಈಗಾಗಲೇ ರಾಷ್ಟ್ರದ್ಯಂತ ಕೋವೀಡ್ ಶೀಲ್ಡ್ ಲಸಿಕೆಯನ್ನು ಜನವರಿ 16 ರಿಂದ ಅಭಿಯಾನ ಪ್ರಾರಂಭಿಸಿದ್ದು, ಮೊದಲು ನಮ್ಮ ಆರೋಗ್ಯ ಇಲಾಖೆಯ ಪ್ರೆಂಟ್ ಲೈನ್ ವಾರಿಯರ್ಸ್ ಗಳಿಗೆ ನೀಡಲಾಗಿತ್ತು. ನಂತರ ತಾಲೂಕು ಆಡಳಿತ, ಕಂದಾಯ ಇಲಾಖೆ ,ಪೊಲೀಸ್,ಪುರಸಭೆ,ತಾಲೂಕು ಪಂಚಾಯತಿ ಪತ್ರಕರ್ತರಿಗೆ ಹಂತಹಂತವಾಗಿ ಲಸಿಕೆಯನ್ನು ನೀಡಲಾಗುವುದು. ಸಾರ್ವಜನಿಕರಿಗೆ ಈ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿದ್ದು ಇದರಿಂದ ಯಾವುದೇ ಅಡ್ಡಪರಿಣಾಮವಿಲ್ಲ ಎಂದು ತಿಳಿಸಿದರು.
ಈ ವೇಳೆ ತಾಪಂ ಕಾರ್ಯನಿರ್ವಹಣಾ ಅಧಿಕಾರಿ ರವಿಕುಮಾರ್, ಮುಖ್ಯಾಧಿಕಾರಿ ಮಂಜುನಾಥ್, ತಾಲೂಕು ಆರೋಗ್ಯ ಅಧಿಕಾರಿ ಡಾ ವಿಜಯ್, ವೃತ್ತ ನಿರೀಕ್ಷಕರಾದ ಸಿದ್ದರಾಮೇಶ್ವರ್,ಕ್ಷೇತ್ರ ಶಿಕ್ಷಣ ಅಧಿಕಾರಿ ಲೋಕೇಶ್, ಪುರಸಭೆ ಆರೋಗ್ಯ ಅಧಿಕಾರಿ ಲೋಹಿತ್,ಪರಿಸರ ಅಭ್ಯಂತರರಾದ ಮಧುಸೂದನ್, ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.