
ಬೇಲೂರು ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳನ್ನು ಮಾಜಿ ಸಚಿವ ಬಿ, ಶಿವರಾಂ ಅಭಿನಂದಿಸಿದರು. ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಬಿ,ಶಿವರಾಂ ಅವರು, ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ನಾವು ಜೆಡಿಎಸ್ ಜೊತೆ ಮೈತ್ರಿಯಾಗಿದ್ದೇ ದೊಡ್ಡ ತಪ್ಪಾಗಿದೆ,ನಮ್ಮ ಕಾರ್ಯಕರ್ತರು ಮನನೊಂದು ಮತ ಹಾಕಿದ್ದರು. ಆದರೆ ಅವರು ತಮ್ಮ ನರಿ ಬುದ್ದಿ ಮತ್ತೆ ತೋರಿಸುವ ಮೂಲಕ ಹೀನಾಯ ರಾಜಕಾರಣಕ್ಕೆ ಇಳಿದ್ದಿದ್ದಾರೆ. ಇನ್ನು ಮುಂದಾದರೂ ನಮ್ಮ ಕಾಂಗ್ರೆಸ್ ಪಕ್ಷದ ರಾಜಕೀಯ ಮುಖಂಡರು ಬುದ್ದಿ ಕಲಿಯಬೇಕಿದೆ ಎಂದ್ರು. ಇದೇ ವೇಳೆ ಗೆದ್ದಂತ ಅಭ್ಯರ್ಥಿಗಳನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಬೇಲೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಶಾಂತ್ ,ಜಿಲ್ಲಾ ಪಂಚಾಯಿತಿ ಸದಸ್ಯ ಸೈಯದ್ ತೌಫಿಕ್, ಜಾವಗಲ್ ಮಹದೇವ್, ಮಾಜಿ ಸಫಾಯಿ ಕರ್ಮಚಾಯಿ ಅಧ್ಯಕ್ಷ ಎಂ ಆರ್ ವೆಂಕಟೇಶ್, ತಾಲೂಕು ನಗರ ಅಧ್ಯಕ್ಷ ಅಶೋಕ್, ತೀರ್ಥಕುಮಾರಿ, ಜಮಾಲುದ್ದೀನ್, ಮುದ್ದಮ್ಮ, ಶಾಂತಕುಮಾರ್, ವಿರುಪಾಕ್ಷ, ಸತ್ಯನಾರಾಯಣ, ಇಕ್ಬಾಲ್ ಇತರರು ಹಾಜರಿದ್ದರು.