

ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಾಕೆರೆ ಎಂಬಲ್ಲಿ ನಸುಕಿನ ಜಾವ ರೈಲ್ವೆ ಹಳಿಯ ಮೇಲೆ ರೈಲು ಡಿಕ್ಕಿ ಹೊಡೆದು ಅಪರೂಪದ 3ರಿಂದ 4 ವರ್ಷದ ಒಳಗಿನ ಕರಿ ಚಿರತೆ ಸಾವನ್ನಪ್ಪಿದೆ. ಸ್ಥಳೀಯರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ವಶಕ್ಕೆ ಪಡೆದು, ವನ್ಯ ಜೀವಿ ನಿಯಮಾವಳಿ ಪ್ರಕಾರ ವಂಡ್ಸೆ ಅರಣ್ಯ ಪ್ರದೇಶದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಿದರು.