Header Ads
Header Ads
Breaking News

ಬೈಕಂಪಾಡಿಯ ಮಹಿಳಾ ಸಮಾಜ, ಯುವತಿ ಮಂಡಲದ ಸಂಭ್ರಮ : ಸಸಿಕಾಂತ್ ಸೆಂಥಿಲ್‌ರಿಂದ ಉದ್ಘಾಟನೆ

ಮಹಿಳಾ ಸಮಾಜ ಬೈಕಂಪಾಡಿ, ಯುವತಿ ಮಂಡಲ ಬೈಕಂಪಾಡಿಯು ಸಾಮಾಜಿಕ, ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಛಾಪು ಮೂಡಿಸಿ ಇದೀಗ ವಜ್ರಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ.

ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಇದೇ ವೇಳೆ ಕಾರ್ಯಕ್ರಮದಲ್ಲಿ ವೃಂದಾ ಕೊನ್ನಾರ್ ಮತ್ತು ಬೈಕಂಪಾಡಿಯ ಚೈಯ್ಲ ಮನೆಯ ದಿವಂಗತ ಚೆನ್ನಪ್ಪ ಕಾಂಚನ್ ರವರು ಅವರ ಮನೆಯಲ್ಲಿಯೇ ಒಂದು ಕೊಠಡಿ ನೀಡಿ ಮಹಿಳಾ ಸಮಾಜಕ್ಕೆ ಸಹಸರಿಸಿದ್ದರು. ಅವರು ನೀಡಿದ ಸಹಕಾರಕ್ಕಾಗಿ ದಿವಂಗತ ಚೆನ್ನಪ್ಪ ಕಾಂಚನ್ ರವರ ಮನೆಯವರನ್ನು ಸನ್ಮಾನಿಸಿದರು.
ಈ ಸಂದರ್ಭ ಕಾರ್ಯಕ್ರಮದಲ್ಲಿ ಬೈಕಂಪಾಡಿಯ ಮಹಿಳಾ ಸಮಾಜದ ಅಧ್ಯಕ್ಷರಾದ ಮೋಹಿನಿ ವಸಂತ್, ಜಿ.ಪಂ. ಸಿಇಒ ಡಾ. ಆರ್. ಸೆಲ್ವಮಣಿ, ಮೋಗವೀರ ಸಭಾದ ವಾಸುದೇವ ಸಾಲ್ಯಾನ್, ಕೆಎಫ್‌ಡಿಸಿಯ ಮಾಜಿ ಅಧ್ಯಕ್ಷರಾದ ರಾಮಚಂದ್ರರ್ ಬೈಕಂಪಾಡಿ, ಜಗದೀಶ್ ಬಂಗೇರ, ಓಮ್‌ದಾಸ್ ಸಾಲ್ಯಾನ್, ಕೇಶವ್ ಕಾಂಚನ್, ಸುಮತಿ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *