Header Ads
Breaking News

ಬೈಕ್‌ನಲ್ಲಿ ಹೋಗುತ್ತಿದ್ದ ಕಾರ್ಮಿಕನಿಗೆ ಲಾರಿ ಢಿಕ್ಕಿ : ಮಂಗಳೂರಿನ ಎಂಡಿಎಲ್ ಯಾರ್ಡ್ ಬಳಿ ನಡೆದ ಘಟನೆ

ನವಮಂಗಳೂರು ಬಂದರಿನೊಳಗೆ ಎಂಡಿಎಲ್ ಯಾರ್ಡ್ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದ ಕಾರ್ಮಿಕನೋರ್ವನಿಗೆ ಲಾರಿ ಢಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಸುರತ್ಕಲ್ ಸಮೀಪದ ಗುಡ್ಡೆಕೊಪ್ಲ ನಿವಾಸಿ ರಂಜನ್ ಶ್ರೀಯಾನ್ ಮೃತಪಟ್ಟವರು. ಖಾಸಗಿ ಶಿಪ್ಪಿಂಗ್ ಕಂಪೆನಿಯಲ್ಲಿ ಕೆಲಸದಲ್ಲಿದ್ದ ಇವರ ಬೈಕ್‌ಗೆ ಸರಕು ಹೇರಿಕೊಂಡು ಬಂದ ಲಾರಿ ಢಿಕ್ಕಿ ಹೊಡೆದಿದೆ. ಢಿಕ್ಕಿಯಾದ ರಭಸಕ್ಕೆ ಲಾರಿಯು ಬೈಕ್‌ನ್ನು ಸುಮಾರು 20ಮೀಟರ್‌ಗಳಷ್ಟು ದೂರ ಎಳೆದುಕೊಂಡು ಹೋಗಿದ್ದು, ರಂಜನ್ ದೇಹ ಛಿದ್ರವಾಗಿದೆ. ಅವಿವಾಹಿತರಾಗಿದ್ದ ಮೃತರು ಮನೆಯ ಹಿರಿಯ ಮಗನಾಗಿದ್ದರು. ಮಂಗಳೂರು ಉತ್ತರ ಠಾಣೆಯಲ್ಲಿ ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

Related posts

Leave a Reply

Your email address will not be published. Required fields are marked *