Breaking News

ಬೈಕ್ , ಲಾರಿ ಢಿಕ್ಕಿ, ಖಾಸಗಿ ಬಸ್ ಚಾಲಕ ನಿರ್ವಾಹಕನ ಸಾವು

ಉಳ್ಳಾಲ: ಕೋಟೆಕಾರು ಬೀರಿ ಬಳಿ ಅಪಘಾತದಲ್ಲಿ ಗಾಯಗೊಂಡಿದ್ದ ಕೊಲ್ಯ ಕನೀರುತೋಟ ನಿವಾಸಿ ನರೇಶ್ ಕನೀರುತೋಟ(28) ಚಿಕಿತ್ಸೆ ಫಲಕಾರಿಯಾಗದೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಬೆಳಗ್ಗೆ ನಿಧನ ಹೊಂದಿದರು.
ಖಾಸಗಿ ಬಸ್‌ನಲ್ಲಿ ನಿರ್ವಾಹಕರಾಗಿದ್ದ ನರೇಶ್ ಕೆಲವು ದಿನಗಳ ಹಿಂದೆ ಬೈಕ್‌ನಲ್ಲಿ ತಲಪಾಡಿ ಕಡೆ ಸಂಚರಿಸುತ್ತಿದ್ದಾಗ ಲಾರಿ ಬಡಿದು ಗಂಭೀರ ಗಾಯಗೊಂಡಿದ್ದರು. ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಹಿಂದೂ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ಅವರು ತಾಯಿ, ತಂಗಿ ಅಣ್ಣನಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉಳ್ಳಾಲ ತಾಲೂಕು ಸಹ ಸೇವಾ ಪ್ರಮುಖ್ ಮಹೇಶ್ ಕೊಲ್ಯ ಇವರನ್ನು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Related posts

Leave a Reply