Header Ads
Header Ads
Header Ads
Breaking News

ಬೊರ್ಡರ್ ಎಕ್ಸ್‌ಪೋದ ಸಮಾರೋಪ : ತೂಮಿನಾಡಿನಲ್ಲಿ ನಡೆದ ಕಾರ್ಯಕ್ರಮ

ಕಳೆದ ಒಂದು ತಿಂಗಳಿನಿಂದ ಕರ್ನಾಟಕ ಕೇರಳ ಗಡಿ ಪ್ರದೇಶವಾದ ತೂಮಿನಾಡಿನಲ್ಲಿ ನಡೆಯುತಿದ್ದ ಬೊರ್ಡಾರ್ ಎಕ್ಸ್ಪೋ 2019 ಇದರ ಸಮಾರೋಪ ಸಮಾರಂಭದ ಉದ್ಘಾಟನೆಗಾಗಿ ಆಗಮಿಸಿದ ಮಂಜೇಶ್ವರ ಶಾಸಕರು ಯುವಕರೊಂದಿಗೆ ಸೇರಿ ಮಾಪ್ಪಿಲ ಪ್ಪಟುಗಳನ್ನು ಹಾಡಿ ಸೇರಿದವರನ್ನು ರಂಜಿಸಿದ್ದಾರೆ. ಬಳಿಕ ತೂಮಿನಾಡು ಅರಬ್ ರೈಡರ್ಸ್ ಕಬಡ್ಡಿ ಕಬಡ್ಡಿ ಮೈದಾನಕ್ಕೆ ತೆರಳಿದ ಶಾಸಕರು ಪಂದ್ಯಾಟದ ಮಧ್ಯೆ ಮೈದಾನಕ್ಕಿಳಿದ ಶಾಸಕರು ಕಬಡ್ಡಿ ಆಟವಾಡಿ ಸೇರಿದವರನ್ನು ಆಚಾರಿ ಮೂಡಿಸಿದರು. ಕ್ರೀಡೆಯಲ್ಲೂ ಆಸಕ್ತಿಯನ್ನು ಹೊಂದಿರುವ ಶಾಸಕರು ಮಂಜೇಶ್ವರದಲ್ಲಿ ಕಬಡ್ಡಿಯ ಉನ್ನತಿಗಾಗಿ ಪ್ರೋತ್ಸಾಹಿಸುವುದಾಗಿ ತಿಳಿಸಿದರು. ಈ ಸಂದರ್ಭ ಅರಬ್ ರೈಡರ್ಸ್ ವತಿಯಿಂದ ಶಾಸಕರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಕಾಸರಗೋಡು ಹಾಗೂ ಮಂಗಳೂರಿನಲ್ಲಿ ಈ ತನಕ ಪ್ರದರ್ಶನಗೊಳ್ಳದ ಚಾಂತಾರ ಮನರಂಜನೆ ಇಲ್ಲಿಯ ವಿಶೇಷತೆಯಾಗಿತ್ತು . ಜೊತೆಗೆ ಐಸ್ ವರ್ಲ್ಡ್ , ಸೆಲ್ಫಿ ಯು ಪಾಯಿಂಟ್ , ಜಾನ್ ಫಿಲ್ , ಕೊಲಂಬೊಸ್ , ಡ್ರಾಗನ್ ರೈಲು, ಬ್ರೇಕ್ ಡ್ಯಾನ್ಸ್ , ಮಕ್ಕಳ ವಾಟರ್ ಬೋಟ್ ಎಕ್ಸ್ ಪೋ ಗೆ ಆಗಮಿಸುವವರನ್ನು ಆಕರ್ಷಿಸುತ್ತಿತ್ತು.

Related posts

Leave a Reply

Your email address will not be published. Required fields are marked *