Header Ads
Breaking News

ಬೊಳುವಾರಿನಲ್ಲಿ ಅಂಗಡಿಗಳಿಗೆ ಆಕಸ್ಮಿಕ ಬೆಂಕಿ ಪ್ರಕರಣ: ಶಾಸಕ ಸಂಜೀವ ಮಠಂದೂರು

ಪುತ್ತೂರು: ಅಕ್ಟೋಬರ್ 15ರ ನಸುಕಿನ ಜಾವ ಬೊಳುವಾರಿನಲ್ಲಿರುವ ಹ್ಯಾರ್ ಸ್ಟುಡಿಯೊ ಮೆನ್ಸ್ ಪಾರ್ಲರ್ ಸೆಲೂನ್, ಡಿ.ಕೆ.ಮೊಬೈಲ್ ಮತ್ತು ತರಕಾರಿ ಅಂಗಡಿಗಳಿಗೆ, ಎರಡು ಹೊಟೇಲ್‍ಗಳಿಗೆ ಬೆಂಕಿ ಹತ್ತಿಕೊಂಡಿರುವ ಘಟನಾ ಸ್ಥಳಕ್ಕೆ ಅ.16ರಂದು ಶಾಸಕ ಸಂಜೀವ ಮಠಂದೂರು ಭೇಟಿ ನೀಡಿದರು.

ಇದೇ ವೇಳೆ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಸರಕಾರದಿಂದ ವಿಶೇಷ ಪ್ರಕರಣವೆಂದು ಪರಿಹಾರ ಕೊಡಲು ಅವಕಾಶವಿದ್ದರೆ ಸಂಬಂಧಪಟ್ಟ ತಹಶೀಲ್ದಾರ್ ಮತ್ತು ಸಹಾಯಕ ಕಮೀಷನರ್ ಮೂಲಕ ವರದಿ ಮಾಡಿ ಸರಕಾರಕ್ಕೆ ಸಲ್ಲಿಸಿ ಸಂಬಂಧಪಟ್ಟ ಕಂದಾಯ ಸಚಿವರು ಮತ್ತು ಮುಖ್ಯಮಂತ್ರಿಗಳಲ್ಲಿ ಮಾತನಾಡಿ ಪ್ರಯತ್ನ ಮಾಡುವ ಸಂಗತಿ ಮಾಡುತ್ತೇನೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ನಗರಸಭಾ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಪೌರಾಯುಕ್ತೆ ರೂಪಾ ಶೆಟಿ, ಸಹಾಯಕ ಕಾರ್ಯಪಾಲ ಅಭಿಯಂತರ ಅರುಣ್, ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಜಯಶ್ರೀ ಎಸ್ ಶೆಟ್ಟಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *