Header Ads
Header Ads
Breaking News

ಬ್ಯಾಂಕ್‌ಗಳ ವಿಲೀನ ವಿರೋಧಿಸಿ ಉಡುಪಿಯಲ್ಲಿ ಪ್ರತಿಭಟನೆ

 ಕಾರ್ಪೊರೇಷನ್ ಬ್ಯಾಂಕ್‌ನ ತವರು ಉಡುಪಿಯಲ್ಲಿ ಬ್ಯಾಂಕ್ ನೌಕರರು ಭಾರೀ ಪ್ರತಿಭಟನೆಗೆ ಇಳಿದಿದ್ದಾರೆ. ಕೇಂದ್ರ ಸರಕಾರದ ಬ್ಯಾಂಕ್ ವಿಲೀನ ಪ್ರಕ್ರಿಯೆ ಒಂದು ಕಾರ್ಮಿಕ ವಿರೋಧಿ ನೀತಿ ಎಂದು ಆರೋಪಿಸಿ ಕಾರ್ಪೊರೇಷನ್ ಬ್ಯಾಂಕ್ ಎದುರು ನೌಕರರು ಪ್ರತಿಭಟನೆ ನಡೆಸಿದ್ರು. ಮುಖ್ಯವಾಗಿ ಹತ್ತು ಸಾರ್ವಜನಿಕ ಬ್ಯಾಂಕ್‌ಗಳನ್ನು ವಿಲೀನಗೊಳಿಸಿ 4ಬ್ಯಾಂಕ್‌ಗಳನ್ನಾಗಿ ಮಾಡುವುದು ಉಳಿದ ಆರು ಬ್ಯಾಂಕ್ ಗಳ ಕತ್ತು ಹಿಸುಕಿದಂತೆ. ಕಾರ್ಪೊರೇಷನ್ ಬ್ಯಾಂಕ್ ಕರಾವಳಿಯಲ್ಲೇ ಹುಟ್ಟಿದ ಹೆಮ್ಮೆಯ ಬ್ಯಾಂಕ್ ಆಗಿದ್ದು ವಿಲೀನದಿಂದ ಈ ಬ್ಯಾಂಕ್ ಅಸ್ತಿತ್ವ ಕಳೆದುಕೊಳ್ಳಲಿದೆ. ಕೇಂದ್ರ ಸರಕಾರದ ಬ್ಯಾಂಕ್ ವಿಲೀನ ನಿರ್ಧಾರ ಏಕಪಕ್ಷೀಯ ನಿರ್ಧಾರವಾಗಿದೆ ಎಂದು ಆರೋಪಿಸಿದ ನೌಕರರು, ಕೇಂದ್ರದ ವಿರುದ್ಧ ಧಿಕ್ಕಾರ ಕೂಗಿದರು.ದೇಶಕ್ಕೆ ಬ್ಯಾಂಕ್‌ಗಳ ಅವಶ್ಯಕತೆ ಇದೆಯೇ ಹೊರತು ದೊಡ್ಡ ಬ್ಯಾಂಕ್ ಮಾಡುವುದರಿಂದ ಪರಿಹಾರ ಅಲ್ಲ. ಕೇಂದ್ರ ಸರಕಾರ ತನ್ನ ಏಕಪಕ್ಷೀಯ ,ಕಾರ್ಮಿಕ ವಿರೋಧಿ ನೀತಿಯನ್ನು ಮರುಪರಿಶೀಲಿಸಬೇಕು. ಇಲ್ಲದಿದ್ದರೆ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆಗೆ ಇಳಿಯಲಿದೆ ಎಂದು ಪ್ರತಿಭಟನಾಕಾರರು ಕೇಂದ್ರ ಸರಕಾರವನ್ನು ಎಚ್ಚರಿಸಿದ್ದಾರೆ.

Related posts

Leave a Reply

Your email address will not be published. Required fields are marked *