Header Ads
Header Ads
Breaking News

ವರ್ಕಾಡಿ ಗ್ರಾ.ಪಂ ಮಟ್ಟದ ಬ್ಯಾಂಬೂ ಕ್ಯಾಪಿಟಲ್ ಜನಪರ ಯೋಜನೆ ಅಂಗವಾಗಿ ಸುಮಾರು 1800 ಗಿಡಗಳನ್ನು ನೆಡುವ ಕಾರ್ಯಕ್ರಮ

ವರ್ಕಾಡಿ ಗ್ರಾಮ ಪಂಚಾಯತ್ ಮಟ್ಟದ ಬಹು ನಿರೀಕ್ಷಿತ ಬ್ಯಾಂಬೂ ಕ್ಯಾಪಿಟಲ್ ಜನಪರ ಯೋಜನೆಯು ಕೋಣಿ ಬೈಲು ಸೊಡಂಕೂರು ಎಂಬಲ್ಲಿನ ಏಳು ಎಕ್ರೆ ಸ್ಥಳದಲ್ಲಿ ಸುಮಾರು 1800 ಗಿಡಗಳನ್ನು ನೆಡುವ ಮೂಲಕ ಚಾಲನೆ ನೀಡಲಾಯಿತು. ಅದೇ ರೀತಿ ವರ್ಕಾಡಿ ಗ್ರಾ. ಪಂ. ನ ಆಯಾ ವಾರ್ಡುಗಳಲ್ಲಿ ಸುಮಾರು 20,000 ಬಿದಿರಿನ ಗಿಡಗಳನ್ನು ನೆಡಲಾಯಿತು. ಇದಕ್ಕೆ ಅಯಾ ವಾರ್ಡಿನ ಸದಸ್ಯರುಗಳು ನೇತ್ರತ್ವವನ್ನು ನೀಡಿದರು.

ತೀವ್ರ ಕುಡಿಯುವ ನೀರಿನ ಬರ ಎದುರಿಸುತ್ತಿರುವ ಜಿಲ್ಲೆಯ ಸಮಗ್ರ ಚಿತ್ರಣ ಬದಲಿಸುವ ನಿಟ್ಟಿನಲ್ಲಿ, ಕಾಸರಗೋಡು ಜಿಲ್ಲೆಯನ್ನು ದಕ್ಷಿಣ ಭಾರತ ಮಟ್ಟದ ಬಿದಿರು ರಾಜಧಾನಿಯಾಗಿಸುವ ಜಿಲ್ಲಾಡಳಿತದ ಬಹುದೊಡ್ಡ ಕನಸು ಈ ಮೂಲಕ ನನಸಾಗುತ್ತಿದೆ.ಮೊದಲ ಹಂತವಾಗಿ ಕಾಸರಗೋಡು ಮತ್ತು ಮಂಜೇಶ್ವರ ಬ್ಲಾಕ್‌ಗಳಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ. ಪುತ್ತಿಗೆಯಲ್ಲಿ ನಡೆದ ಸಮಾರಂಭಕ್ಕೆ ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಚಾಲನೆ ನೀಡಿದ್ದಾರೆ.

ಏಕಕಾಲಕ್ಕೆ ಜಿಲ್ಲೆಯ ವಿವಿಧೆಡೆ ಯೋಜನೆಗೆ ಚಾಲನೆ ದೊರಕಿದ್ದು, ಗ್ರಾಮಪಂಚಾಯತಿ ಮಟ್ಟದಲ್ಲಿ ಆಯಾ ಪಂಚಾಯತಿಗಳ ಅಧ್ಯಕ್ಷರು, ವಾರ್ಡ್ ಮಟ್ಟದಲ್ಲಿ ಆಯಾ ವಾರ್ಡ್‌ಗಳ ಸದಸ್ಯರು, ಬ್ಲಾಕ್ ಪಂಚಾಯತಿ ಮಟ್ಟದಲ್ಲಿ ಆಯಾ ಸಂಸ್ಥೆಗಳ ಅಧ್ಯಕ್ಷರು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಅಂದು ಬೆಳಿಗ್ಗೆ 10ರಿಂದ 11 ಗಂಟೆಯೊಳಗೆ 3 ಲಕ್ಷ ಬಿದಿರು ಸಸಿಗಳನ್ನು ನೆಡುವ ಮೂಲಕ ಈ ಯೋಜನೆ ಶುಭಾರಂಭಗೊಂಡಿದೆ.
ದೇಶದಲ್ಲೇ ದಾಖಲೆ ನಿರ್ಮಿಸುವ ಸಾಧ್ಯತೆಯಿರುವ ಈ ಯೋಜನೆಯ ಅವಲೋಕನ ನಡೆಸುವ ನಿಟ್ಟಿನಲ್ಲಿ ಕೇಂದ್ರದ ತಂಡ ಇಲ್ಲಿಗೆ ಆಗಮಿಸಿ ಸಂದರ್ಶನ ನಡೆಸಲಿದೆ. ಯೋಜನೆಯ ಕುರಿತು ಅಧ್ಯಯನ ನಡೆಸುವ ನಿಟ್ಟಿನಲ್ಲಿ ಐ.ಎಸ್.ಆರ್.ಒ. ಸಹಾಯ ನೀಡುವುದಾಗಿ ಭರವಸೆ ನೀಡಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಲಕ್ಷಾಮವನ್ನು ತೀವ್ರವಾಗಿ ಅನುಭವಿಸುತ್ತಿರುವ ಜಿಲ್ಲೆಯಲ್ಲಿ ಬಿದಿರು ಬೆಳೆ ಅಧಿಕಗೊಳ್ಳುವ ಮೂಲಕ ನೀರು ಭೂಮಿಗಿಳಿಯುವ ಪ್ರಕ್ರಿಯೆಗೆ ಪೂರಕವಾಗಲಿದೆ. ಇತರ ಜಿಲ್ಲೆಗಳಿಗೆ ಹೋಲಿಸಿದರೆ ಉದ್ದಿಮೆ ಘಟಕಗಳು ಕಡಿಮೆಯಿರುವ ಜಿಲ್ಲೆಯಲ್ಲಿ ಬಿದಿರಿನ ಉದ್ದಿಮೆ ಹೊಸ ಚೈತನ್ಯ ಒದಗಿಸಲಿದೆ. ಕಾಸರಗೋಡು ಜಿಲ್ಲೆಯ ಕೆಂಗಲ್ಲ ನೆಲ ಬಿದಿರು ಬೆಳೆಗೆ ಪೂರಕವಾಗಿದೆ ಎಂದು ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.
ಕೋಣಿ ಬೈಲು ಸೊಡಂಕೂರು ಎಂಬಲ್ಲಿ ವರ್ಕಾಡಿ ಗ್ರಾ. ಪಂ. ಅಧ್ಯಕ್ಷ ಮಜೀದ್ ಬಿ ಎ ರವರು ಗಿಡವನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು  ಕಾಸರಗೋಡು ಜಿಲ್ಲೆಯನ್ನು ಕೇಂದ್ರೀಕರಿಸಿ ಒಂದು ಪ್ರಧಾನವಾದ ಪ್ರೊಜೆಕ್ಟ್ ನ ಉದ್ಘಾಟನೆ ಇಂದು ನೆರವೇರಿದೆ. ಜಿಲ್ಲಾಧಿಕಾರಿ ಸಜಿತ ಬಾಬುರವರ ಒಂದು ಕನಸನ್ನು ಸಾಕಾರ ಮಾಡಲು ಇಂದು ಜಿಲ್ಲೆಯ ಜನತೆ ಮುಂದಾಗಿದ್ದಾರೆ. ತೀವ್ರ ಕುಡಿಯುವ ನೀರಿನ ಬರ ಎದುರಿಸುತ್ತಿರುವ ಜಿಲ್ಲೆಯ ಸಮಗ್ರ ಚಿತ್ರಣ ಬದಲಿಸುವ ನಿಟ್ಟಿನಲ್ಲಿ, ಕಾಸರಗೋಡು ಜಿಲ್ಲೆಯನ್ನು ದಕ್ಷಿಣ ಭಾರತ ಮಟ್ಟದ ಬಿದಿರು ರಾಜಧಾನಿಯಾಗಿಸುವ ಜಿಲ್ಲಾಡಳಿತದ ಬಹುದೊಡ್ಡ ಕನಸು ಈ ಮೂಲಕ ನನಸಾಗಲಿದೆ ಎಂದು ಅವರು ಹೇಳಿದರು.


ಬಳಿಕ ವಾರ್ಡ್ ಸದಸ್ಯೆ ಭಾರತಿ ಎಸ್ ಮಾತನಾಡಿ  ಈ ಯೋಜನೆಯ ಭಾಗವಾಗಿ ನನ್ನ ವಾರ್ಡಾದ ಕೋಣಿ ಬೈಲು ಸೊಡಂಕೂರಿನಲ್ಲಿ 1800 ಗುಂಡಿಗಳನ್ನು ನಿರ್ಮಿಸಿ ಸಸಿ ನೆಡಲಾಗಿದೆ ಎಂದು ಹೇಳಿದರು.ಬಳಿಕ ಕ್ರಷಿ ಅಧಿಕಾರಿ ಶಫೀಕ್ ಎಂ ಮಾತನಾಡಿ  ಜಿಲ್ಲಾಧಿಕಾರಿಯವರ ಡ್ರೀಂ ಪ್ರೊಜೆಕ್ಟಾಗಿದೆ ಇದು. ಇದನ್ನು ನಾವು ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ನೌಕರರ ಮೂಲಕ ನಿರ್ವಹಿಸುತಿದ್ದೇವೆ. ಕೇವಲ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಮನಸ್ಸು ಮಾಡಿದರೆ ನಡೆಯದು ಅದಕ್ಕೆ ಊರವರ ಸಹಕಾರ ಕೂಡಾ ಅತೀ ಅಗತ್ಯ ಎಂದು ಅವರು ಹೇಳಿದರು.

ಈ ಸಂದರ್ಭ ಪಂ. ಕಾರ್ಯದರ್ಶಿ ರಾಜೇಶ್ವರಿ, ಸದಸ್ಯರಾದ ಸೀತ, ಮೈಮೂನ, ರಹ್ಮತ್ ರಜಾಕ್, ಲೋಕೋಪಯೋಗಿ ಇಲಾಖಾ ಸಿಬ್ಬಂದಿಗಳಾದ ರಾಜೆಶ್, ಅನ್ವರ್, ಕಾರ್ಮಿಕರಾದ ಅಶೋಕ, ಸುಧಾಮಣಿ, ಶುಭಶ್ರೀ ಮೊದಲಾದವರು ಉಪಸ್ಥರಿದ್ದರು.
ನೌಕರಿ ಖಾತರಿ ಯೋಜನೆಯ ಕಾರ್ಮಿಕರು ಗುಳಿ ತೋಡುವ, ಸಸಿ ನೆಡುವ ಕಾಯಕದಲ್ಲಿ ತೊಡಗಲಿದ್ದಾರೆ. ಯೋಜನೆಗಾಗಿ ಈಗಾಗಲೇ ನೆಟ್ಟು ಬೆಳೆಸಿರುವ ೩ತಿಂಗಳ ಸಸಿಗಳು ಸಿದ್ಧವಿವೆ. ಜು.12ರಂದು ಜಿಲ್ಲಾ ಮಣ್ಣು ಸಂರಕ್ಷಣೆ ಕಚೇರಿಯ ಉಸ್ತುವಾರಿಯಲ್ಲಿ ಬಿದಿರು ಯೋಜನೆ ಜಾರಿಗೊಳಿಸುವ ಪ್ರದೇಶಗಳಿಂದ ಮಣ್ಣಿನ ಮಾದರಿ(ಸ್ಯಾಂಪಲ್) ಸಂಗ್ರಹಿಸಲಾಗುವುದು. ಭೂಗರ್ಭ ಜಲ ಇಲಾಖೆ ವತಿಯಿಂದ ಇಲ್ಲಿನ ಜಲಮಟ್ಟದ ಗಣನೆಯನ್ನೂ ಸಂಗ್ರಹಿಸಲಾಗುತ್ತದೆ.

Related posts

Leave a Reply

Your email address will not be published. Required fields are marked *