Header Ads
Header Ads
Breaking News

ಬ್ರಹ್ಮಾವರದ ಶ್ಯಾಮಿಲಿ ಶನಾಯದಲ್ಲಿ ರಕ್ತದಾನ ಕಾರ್ಯಕ್ರಮ

ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ, ಜಿ.ಶಂಕರ್ ಫ಼್ಯಾಮಿಲಿ ಟ್ರಸ್ಟ್ ಇವರ ನೇತೃತ್ವದಲ್ಲಿ ಜಿಲ್ಲಾಡಳಿತ ಉಡುಪಿ ಜಿಲ್ಲೆ ಮತ್ತು ರಕ್ತನಿಧಿ, ಕೆಎಂಸಿ ಮಣಿಪಾಲ ಇವರ ಸಹಯೋಗದೊಂದಿಗೆ ವಿವಿಧ ಸಂಘ ಸಂಸ್ಥೆಗಳ ಭಾಗವಹಿಸುವಿಕೆಯೊಂದಿಗೆ 1 ಲಕ್ಷಕ್ಕೂ ಅಧಿಕ ಯೂನಿಟ್ ರಕ್ತದಾನದ ಮಹಾಕ್ರಾಂತಿಯ ಸಾಧನೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಬ್ರಹ್ಮಾವರದ ಶ್ಯಾಮಿಲಿ ಶನಾಯದಲ್ಲಿ ನೆರವೇರಿತು.ಈ ಕಾರ್ಯಕ್ರಮದಲ್ಲಿ ಅತ್ಯಧಿಕ ಬಾರಿ ರಕ್ತದಾನ ಮಾಡಿದ ರಕ್ತ ದಾನಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು.
ಈ ಸಂಧರ್ಬದಲ್ಲಿ ಮಾತನಾಡಿದ ಜಿ ಶಂಕರ್ ಫ್ಯಾಮಿಲಿ ಟ್ರಸ್ಟನ ಪ್ರವರ್ತಕ ಜಿ ಶಂಕರ್,ಜಿಲ್ಲಾಡಳಿತ ಯಾವುದೇ ಕಾರ್ಯಕ್ರಮಗಳಿಗೆ ಸ್ಪಂದಿಸುತ್ತಿಲ್ಲ ,ನಾವು ಮಾಡುವುದು ಸಮಾಜಪೂರಕ ಕೆಲಸ ,ನಾವು 10 ವರ್ಷಗಳಲ್ಲಿ 1 ಲಕ್ಷ ಯೂನಿಟ್ ರಕ್ತದಾನದ ಗುರಿ ತಲುಪಿದ್ದೆವೆ ನಮ್ಮ ರಕ್ತದಾನದ ಶಿಬಿರ ನಿರಂತರವಾಗಿ ಸಾಗಿತ್ತಿದೆ ಇಂತಹ ಕಾರ್ಯಕ್ರಮಗಳಿಗೆ ನಮಗೆ ಜಿಲ್ಲಾಡಳಿತದ ಪ್ರೋ ತ್ಸಾಹ ಬೇಕು ಎಂದರು.  

ರಕ್ತದಾನದಿಂದ ಒಟ್ಟಾದ ರಕ್ತದಲ್ಲಿ25 ಯುನಿಟನ್ನು ಜಿಲ್ಲಾಸ್ಪತ್ರೆಗೆ ನೀಡುತ್ತಿದ್ದೆವೆ ಇದೇ ರೀತಿ ನಮಗೆ ಜಿಲ್ಲಾಡಳಿತದಿಂದ ಪ್ರೋತ್ಸಾಹ ದೊರೆಯದಿದ್ದಲ್ಲಿ ಜಿಲ್ಲಾಸ್ಪತ್ರೆಯ ರಕ್ತನಿದಿಗೆ ನೀಡುವುದನ್ನು ನಿಲ್ಲಿಸುತ್ತೇವೆ ಎಂದು ಬೇಸರದಿಂದ ನುಡಿದರು.ಶಾಸಕ ರಘುಪತಿ ಭಟ್ ಮಾತನಾಡಿ ಜಿಲ್ಲಡಳಿತ ಜಿ.ಶಂಕರ್ ಪ್ಯಾಮಿಲಿ ಟ್ರಸ್ಟ್ ಮಾಡುತ್ತಿರುವ ಸಮಾಜ ಮುಖಿ ಕಾರ್ಯಗಳಿಗೆ ಸ್ಪಂದಿಸಬೇಕು. ಈಗಾಗಲೇ ಬ್ರಹ್ಮಾವರಕ್ಕೆ ಯುಜಿಡಿ ಆಗಬೆಕು ಎಂದು ಜಿ.ಶಂಕರ್ ಹೇಳಿದ್ದಾರೆ. ಒಳಚರಂಡಿ ಯೋಜನೆ ಆಗಬೇಕಾದರೆ ಪುರಸಭೆಯಿಂದ ಸಾದ್ಯ.ಆದ್ದರಿಂದ ಮೊದಲು ಬ್ರಹ್ಮಾವರ ಪುರಸಭೆಯಾಗಬೇಕು. ಈ ಪ್ರಯತ್ನಕ್ಕೆ ನಾನು ಶ್ರಮಿಸುತ್ತೇನೆ ಎಂದರು.ಬ್ರಹ್ಮಾವರ ತಹಶೀಲ್ದಾರ್ ಭಾರತಿ,ಕಸ್ತೂರ್ ಬ ಆಸ್ಪತ್ರೆಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ,ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಯ ಅಧ್ಯಕ್ಷ ವಿನಯ್ ಕರ್ಕೇರ ,ಕೆ ಎಮ್ ಸಿ ಯ ಡಾ ಸಭಾಹಿತ್ ಮತ್ತಿತರರು ಉಪಸ್ಥಿತರಿದ್ದರು. ನೂರಾರು ಮಂದಿ ರಕ್ತದಾನವನ್ನು ಮಾಡಿದರು.

Related posts

Leave a Reply