Header Ads
Header Ads
Breaking News

ಭಕ್ತರಿಗೊಲಿಯುವ ಕಾರ್ಣಿಕ ದೈವ ತನಿಯ ಕೊರಗಜ್ಜ : ದೈವದ ಮಹಿಮೆ ತಿಳಿಯಲು ಒಮ್ಮೆ ಭೇಟಿ ನೀಡಿ ಈ ಪುಣ್ಯ ಕ್ಷೇತ್ರಕ್ಕೆ

ತುಳುನಾಡಿನಲ್ಲಿ ಭಕ್ತರ ಕೂಗಿಗೆ ತಟ್ಟನೆ ಸ್ಪಂಧಿಸುವ ಕಲಿಯುಗದ ಕಾರ್ಣಿಕ ದೈವವಾಗಿ ಎಲ್ಲಾ ಸಮಾಜದ ಜನರಿಂದಲೂ ಆರಾಧಿಸಿಕೊಂಡು ಬರುತ್ತಿರುವ ಪುಟ್ಟ-ಪುಟ್ಟ ಹರಕೆಗಳಿಗೂ ದೊಡ್ಡ ದೊಡ್ಡ ಬೇಡಿಕೆ ಈಡೇರಿಸುವ ಕಲಿಯುಗದ ಕಾರ್ಣಿಕ ದೈವದ ಮಹಿಮೆ ತಿಳಿಯಲು ಒಮ್ಮೆ ಭೇಟಿನೀಡಿ ಪಡುಬಿದ್ರಿಯ ಅಲಂಗಾರು ಶ್ರೀಆದಿಶಕ್ತಿ ಕೊರಗಜ್ಜ ಕ್ಷೇತ್ರಕ್ಕೆ.ಕೊರಗಜ್ಜ ದೈವಕ್ಕೆ ತುಳುನಾಡಿನಲ್ಲಿ ವಿಶೇಷ ಇತಿಹಾಸ ಇದೆ, ತುಳಿತಕ್ಕೆ ಒಳಗಾದ ಜನಾಂಗಕ್ಕೆ ಸೇರಿದ ವ್ಯಕ್ತಿಯೋರ್ವ ದೈವತ್ವಕ್ಕೆ ಸೇರಿದ ಎಂಬ ಪ್ರತೀತಿ ಇದೆ. ನಾಗರಿಕಾ ಸಮಾಜದಿಂದ ದೂರ ಇರಿಸಲಾದ ಜನ ಸಮೂದಾಯದ ಕೊರಗ ಸಮೂದಾಯ, ಆ ಕಾಲದಲ್ಲಿ ಊರಿನ ಹೊರ ವಲಯದ ಕೋಟಿಕೊಪ್ಪ ಎಂಬಲ್ಲಿ ಈ ಸಮೂದಾಯ ದೌರ್ಜನ್ಯಕ್ಕೆ ಒಳಗಾದ ಕಾಲ.. ರೋಗಗಕ್ಕೆ ತುತ್ತಾಗಿ ಸಮೂದಾಯವೇ ನಾಶವಾದ ಪರಿಸ್ಥಿತಿಯಲ್ಲಿ ಮಗುವೊಂದು ಉಳಿದುಕೊಳ್ಳುತ್ತೆ.. ಆ ಮಗು ಚೆನ್ನಣ್ಣ ಬೈದ ಹಾಗೂ ಮಾಯಡಕ್ಕ ಬೈದೆದಿ ದಂಪತಿಗಳ ಆರೈಕೆಯಲ್ಲಿ ಬೆಳೆಯುತ್ತಾನೆ, ಸಾಮಾಜಿಕ ಅಸಮಾನತೆ ಸಂದರ್ಭದಲ್ಲಿ ಸಿಡಿದು ದೈವಸ್ಥಾನ ಪ್ರವೇಶ ಸಂಘರ್ಷದಲ್ಲಿ ಮಡಿದು ಕೊರಗಜ್ಜ ದೈವತ್ವಕ್ಕೆ ಏರಿದ ಎಂಬುದು ಇತಿಹಾಸ.
ಅಂಥಹ ಕೆಳಸ್ಥರದಿಂದ ದೈವತ್ವಕ್ಕೆ ಏರಿ ಇದೀಗ ಕಾರ್ನಿಕ ದೈವವಾಗಿ ಎಲ್ಲಾ ವರ್ಗದ ಜನರಿಂದ ಪೂಜಿಸಲ್ಪಡುವ ಕೊರಗಜ್ಜ, ಕೊರಗಜ್ಜ ಕ್ಷೇತ್ರದಲ್ಲಿ ಕೊರಗ ಸಮೂದಯಕ್ಕೆ ಹೆಚ್ಚು ಪ್ರಾಧನ್ಯತೆ ನೀಡಲಾಗುತ್ತಿದ್ದು, ಇಂಥಹ ಹಲವಾರು ಕೊರಗಜ್ಜ ಕ್ಷೇತ್ರಗಳ ಪೈಕಿ ಅತೀ ಹೆಚ್ಚು ಭಕ್ತ ಜನರ ಇಷ್ಟಾರ್ಥವನ್ನು ಈಡೇರಿಸುತ್ತಾ ತನ್ನ ಕಾರ್ನಿಕವನ್ನು ಊರ-ಪರವೂರ ಮಾತ್ರವಲ್ಲ ರಾಜ್ಯ ಹೊರ ರಾಜ್ಯಗಳ ಭಕ್ತರನ್ನು ತನ್ನತ್ತ ಸೆಳೆಯುತ್ತಿರುವ ಆಕರ್ಷಣಿಯ ಪುಣ್ಯ ಕ್ಷೇತ್ರ ಪಡುಬಿದ್ರಿ ಅಲಂಗಾರು ಈ ಕ್ಷೇತ್ರದಲ್ಲಿ ನಗ-ನಗದನ್ನು ಸುರಿಯ ಬೇಕೆಂದಿಲ್ಲ ತಮ್ಮ ಕಷ್ಟ ಕಾರ್ಪಣ್ಯಗಳ ನಿವಾರಣೆಗಾಗಿ ಕೊರಗಜ್ಜನಿಗೆ ಬೀಡ-ಚಕ್ಕುಲಿ-ಮಧ್ಯ ಇಂಥಹ ಸಣ್ಣ ಪುಟ್ಟ ಹರಕೆಗಳನ್ನು ಹೇಳಿ ಪ್ರಾರ್ಥಿಸಿದರೆ ಸಾಕು ಅದೇಷ್ಟೋ ಭಕ್ತ ಸಮಸ್ಯೆಗೆ ಪರಿಹಾರ ಕಂಡುಕೊಂಡ ದಾಖಲೆಗಳು ಈ ಕ್ಷೇತ್ರದಲ್ಲಿದೆ.

ಪ್ರತೀ ತಿಂಗಳ ಅಮಾವಾಸ್ಯೆ ಸಂದರ್ಭ ಹಾಗೂ ನಿರಂತರವಾಗಿ ಹರಕೆಯ ನೇಮೋತ್ಸವ ಅಗೆಲು ಸೇವೆ ಈ ಕ್ಷೇತ್ರದಲ್ಲಿ ನಡೆಯುತ್ತಿರುವುದು ಇಲ್ಲಿನ ಕೊರಗಜ್ಜನ ಕಾರ್ಣಿಕಕ್ಕೆ ಸಾಕ್ಷಿಯಾಗಿದೆ.

Related posts

Leave a Reply

Your email address will not be published. Required fields are marked *