Header Ads
Header Ads
Breaking News

ಭಟ್ಕಳ ಗಂಗೊಳ್ಳಿ ನಡುವೆ 2 ಬೋಟುಗಳ ಮುಳುಗಡೆ

ಮಲ್ಪೆಯಿಂದ ತೆರಳಿದ ಆಳಸಮುದ್ರ ಮೀನುಗಾರಿಕೆ ಬೋಟುಗಳು ಭಟ್ಕಳ ಗಂಗೊಳ್ಳಿ ನಡುವೆ ಮುಳುಗಡೆಯಾಗಿದೆ. ಎರಡು ಪ್ರತ್ಯೇಕ ಬೋಟುಗಳು ಮಲ್ಪೆಗೆ ಮರಳುವಾಗ ಮುಳುಗಡೆಯಾಗಿದ್ದು 16ಮಂದಿಯನ್ನು ರಕ್ಷಣೆ ಮಾಡಲಾಗಿದೆ.

ಕಡಲು ಪ್ರಕ್ಷ್ಯುಬ್ದವಾದ ಹಿನ್ನಲೆಯಲ್ಲಿ ಈ ಒಂದು ಅವಘಡ ನಡೆದಿದೆ.ನಿನ್ನೆ ಬೆಳಿಗ್ಗೆ ಮಲ್ಪೆಯಿಂದ ತೆರಳಿದ ೮ಮಂದಿಯಿದ್ದ ಶಿವಗಣೇಶ ಬೋಟು ಸಂಜೆಯಷ್ಟೊತ್ತಿಗೆ ಗಾಳಿ ಮಳೆಯಿಂದ ಕಡಲು ಪ್ರಕ್ಷ್ಯಬ್ದವಾದ ಹಿನ್ನಲೆಯಲ್ಲಿ ಶಿವಗಣೇಶ್ ಬೋಟಿನಲ್ಲಿ ತೂತು ಬಿದ್ದು ಬೋಟು ಮುಳುಗಲು ಶುರುವಾಗಿದೆ. ಕೂಡಲೇ ಮಲ್ಪೆಗೆ ಕರೆಮಾಡಿದ ಬೋಟಿನಲ್ಲಿದ್ದ ಮೀನುಗಾರರು ರಕ್ಷಣೆಗೆ ಕರೆದಿದ್ದಾರೆ. ಸ್ಥಳಕ್ಕೆ ಮಲ್ಪೆಯಿಂದ ತೆರಳಿದ ಬೇರೊಂದು ಬೋಟಿನಲ್ಲಿದ್ದ ಮೀನುಗಾರರು ಮುಳುಗಡೆಯಾಗುತ್ತಿದ್ದ ಬೋಟಿನಲ್ಲಿದ್ದ 8ಮಂದಿಯನ್ನು ರಕ್ಷಿಸಿ ಮಲ್ಪೆಗೆ ಕರೆತರಲಾಯಿತು. ಇನ್ನು ಇಂದು ಬೆಳಿಗ್ಗೆ ಮೀನುಗಾರಿಕೆ ಮುಗಿಸಿ ಮಲ್ಪೆಗೆ ಮರಳುತ್ತಿದ್ದ ಪದ್ಮದಾಸ್ ಬೋಟು ಗಂಗೊಳ್ಳಿ ಭಟ್ಕಳದ ನಡುವೆ ಮುಳುಗಡೆಯಾಗಿದೆ. ಬೋಟಿನಲ್ಲಿದ್ದ ಮೀನುಗಾರರ ಮಾಹಿತಿ ಮೇಲೆ ಸ್ಥಳಕ್ಕೆ ತೆರಳಿದ ಮಲ್ಪೆಯ ಭಜರಂಗಿ ಬೋಟಿನ ಮೀನುಗಾರರು 8ಮಂದಿ ಮೀನುಗಾರರನ್ನು ರಕ್ಷಿಸಿ ಮಲ್ಪೆಗೆ ಕರೆತಂದಿದ್ದಾರೆ . ಈ ಎರಡು ಮುಳುಗಡೆಯಾಗುವ ಬೋಟಿನಲ್ಲಿದ್ದ ಮೀನುಗಾರರ ರಕ್ಷಣೆ ಲೈವ್ ವೀಡಿಯೋ ಲಭ್ಯವಾಗಿದೆ.

Related posts

Leave a Reply