Header Ads
Breaking News

ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ-ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಪವಿತ್ರ ರಾಮಯ್ಯ ಅವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಪೂಜ್ಯ ಧರ್ಮದರ್ಶಿಗಳಾದ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಭೇಟಿಯ ಸಮಯದಲ್ಲಿ ಶ್ರೀಗಳೊಂದಿಗೆ ಚರ್ಚಿಸುತ್ತಾ, ರಾಜ್ಯ ಸರ್ಕಾರವು ಅಚ್ಚುಕಟ್ಟು ಪ್ರದೇಶದ ಸರ್ವತೋಮುಖ ಅಭಿವೃದ್ದಿಗಾಗಿ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಅಧಿನಿಯಮ 1980ರ ಕಾಯ್ದೆಯಡಿ ಕಾಡ ಪ್ರಾಧಿಕಾರವು 1979ನೇ ಇಸವಿಯಲ್ಲಿ ಸ್ಥಾಪನೆ ಮಾಡಿತು.

ಈ ಒಂದು ಪ್ರಾಧಿಕಾರಕ್ಕೆ ಮಲೆನಾಡು, ಅರೆ ಮಲೆನಾಡು, ಕರಾವಳಿ ಹಾಗೂ ಬಯಲು ಸೀಮೆ ಪ್ರದೇಶದ ಭೌಗೋಳಿಕ ವ್ಯಾಪ್ತಿಯಲ್ಲಿ ಬರುವ ಭಾರಿ ಮತ್ತು ಮಧ್ಯಮ ನೀರಾವರಿ ಯೋಜನೆಗಳು ಒಳಪಡುತ್ತದೆ. ಒಟ್ಟು 12 ಜಿಲ್ಲೆಗಳು ಹಾಗೂ 30 ಬೃಹತ್ ಮತ್ತು ಮಧ್ಯಮ ನೀರಾವರಿ ಯೋಜನೆಗಳು ಸೇರಿವೆ.

ಈ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯು ಪ್ರಾಧಿಕಾರ ವ್ಯಾಪ್ತಿಗೆ ಸೇರುತ್ತದೆ. ಆದರೆ ಕಾಡ ಪ್ರಾಧಿಕಾರದ ಯಾವ ಯೋಜನೆಗಳು ಇಲ್ಲಿಯವರೆಗೂ ಈ ಭಾಗದಲ್ಲಿ ಮುಟ್ಟಿರುವುದಿಲ್ಲ.

ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಅಧಿಕಾರಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸಿದಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೇತ್ರಾವತಿ ನದಿಯು 1100 ಹೆಕ್ಟೇರ್, ಸ್ವರ್ಣ ನದಿಯು 19,000 ಹೆಕ್ಟೇರ್, ಗುರುಪುರ 3,400 ಹೆಕ್ಟೇರ್, ಮುಲ್ಕಿ 5,500 ಹೆಕ್ಟೇರ್, ನಾರಿ ಹೊಳೆ 9,500 ಹೆಕ್ಟೇರ್ ಮತ್ತು ಪಯಾಸವಾಸಿನಿ 2,000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಯೋಜನೆ ಹೊಂದಿರುವುದು ಗಮನಕ್ಕೆ ಬಂದಿದೆ.

ಈ ಆಲೋಚನೆ ಮುಂದಿಟ್ಟುಕೊಂಡು ಅಚ್ಚುಕಟ್ಟು ಭಾಗವನ್ನು ದಕ್ಷಿಣ ಕನ್ನಡದಲ್ಲಿ ವಿಸ್ತರಿಸಲು ಕಾರ್ಯ ಯೋಜನೆ ರೂಪಿಸುವ ಸಲುವಾಗಿ ಅವರ ಮಾರ್ಗದರ್ಶನ ಪಡೆಯಲು ಪೂಜ್ಯ ಶ್ರೀ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಸುದೀರ್ಘವಾಗಿ ಚರ್ಚಿಸಲಾಯಿತು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಪೂಜ್ಯರು ನಮ್ಮ ಭಾಗದಲ್ಲಿ ನೀರಿನ ಅಲಭ್ಯತೆ ಬಹು ವರ್ಷಗಳಿಂದ ಇದ್ದು, ರೈತರಿಗೆ ಉತ್ತಮ ಇಳುವರಿ ಪಡೆಯಲು ಸರಿಯಾದ ಯೋಜನೆಗಳು ಇಲ್ಲದೆ ಇರುವುದು ನಮ್ಮ ಭಾಗದ ರೈತರಿಗೆ ಅನಾನುಕೂಲವಾಗಿದೆ, ನೀವು ನಮ್ಮನ್ನು ಭೇಟಿ ಮಾಡಿ ಯೋಜನೆಯ ಬಗ್ಗೆ ಪ್ರಸ್ತಾಪಿಸಿದ್ದು ಒಳ್ಳೆಯ ಬೆಳವಣಿಗೆ, ಶೀಘ್ರವೇ ಇದಕ್ಕೆ ಸಂಬಂಧಿಸಿದಂತೆ ನಾನು ಅಧಿಕಾರಿಗಳೊಂದಿಗೆ ಕೂತು ಯಾವ ರೀತಿಯಲ್ಲಿ ಯೋಜನೆಗಳು ರೂಪಿಸಬಹುದು, ಯಾವ ರೀತಿಯಲ್ಲಿ ರೈತರಿಗೆ ಅನುಕೂಲ ಮಾಡಿಕೊಡಬಹುದು ಎಂದು ಚರ್ಚಿಸಿ ತೀರ್ಮಾನಿಸುತ್ತೇನೆ ಎಂದು ಅಭಯ ನೀಡಿದರು.

Related posts

Leave a Reply

Your email address will not be published. Required fields are marked *