Header Ads
Breaking News

ಭಯೋತ್ಪಾದನೆ ಬಗ್ಗೆ ಬಿಜೆಪಿಯ ನಿಲುವು ಏನೆಂಬುದು ಗೊತ್ತಾಗುತ್ತಿದೆ: ಕಾಂಗ್ರೆಸ್ ವಕ್ತಾರ ಎಸಿ ವಿನಯರಾಜ್

ಬಿಜೆಪಿ ಪಕ್ಷ ಸ್ವಚ್ಛ ರಾಜಕೀಯ ದೇಶದಲ್ಲಿ ಮಾಡುತ್ತೇವೆ ಎಂದು ಹೇಳುತ್ತಾ ಬಂದಿದೆ. ಆದರೆ ಮಲೆಗಾಂವ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿಯಾಗಿರುವ ಸಾಧ್ವಿ ಪ್ರಾಗ್ಯಾಸಿಂಗ್ ಠಾಕೂರ್‌ಗೆ ಬೋಪಾಲ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಾಡುವುದರ ಮೂಲಕ ಬಿಜೆಪಿ ಪಕ್ಕ ಭಯೋತ್ಪಾದನೆಯ ವಿರುದ್ಧ ಅದರ ನಿಲುವು ಏನೆಂಬುವುದು ಈ ದೇಶಕ್ಕೆ ಗೊತ್ತಾಗಿದೆ ಎಂದು ಕಾಂಗ್ರೆಸ್ ವಕ್ತಾರ ಎ.ಸಿ. ವಿನಯರಾಜ್ ಹೇಳಿದರು.

ಈ ಬಗ್ಗೆ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಪಾಕಿಸ್ತಾನಿ ಆತಂಕವಾದಿ ಅಜುಮಲ್ ಕಸಬ್‌ನನ್ನು ಬಿಜೆಪಿ ಇವತ್ತು ಪ್ರಾಗ್ಯಾಸಿಂಗ್ ಠಾಕೋರ್ ರವರ ಹೇಳಿಕೆಯ ಮುಖಾಂತರ ಸಮರ್ಥನೆ ಮಾಡಿಕೊಂಡಿದೆ. ಎಟಿಎಸ್ ಮುಖ್ಯಸ್ಥರಾದ ಹುತಾತ್ಮ ಹೇಮಂತ್ ಕರ್ಕೇರವರು ಅವರ ಕರ್ತವ್ಯ ನಿರ್ವಹಣೆಗೆ ಸರಕಾರದಿಂದ ಆಶೋಕ ಚಕ್ರ ಪ್ರಶಸ್ತಿಯನ್ನು ಪಡೆದವರು. ಅವರೊಬ್ಬ ಸಮರ್ಥ ಅಧಿಕಾರಿ ಆದರೆ ಆತಂಕವಾದಿಗಳೊಂದಿಗೆ ಹೋರಾಡುತ್ತಾ ತಾನು ಈ ದೇಶಕ್ಕಾಗಿ ಹುತಾತ್ಮರಾದವರು. ಇಂತಹ ಅಧಿಕಾರಿಯವರನ್ನು ರಾವಣ, ರಾಕ್ಷಸರಿಗೆ ಹೋಲಿಕೆ ಮಾಡಿರುವುದು ಸರಿಯಲ್ಲ ಎಂದರು. ಹುತಾತ್ಮರ ಬಗ್ಗೆ ಕಿಂಚಿತ್ತಾದರೂ ಬಿಜೆಪಿ ಪಕ್ಷದ ಮುಖ್ಯಸ್ಥರಿಗೆ ಪ್ರಧಾನಿಯವರಿಗೆ ಗೌರವವಿದ್ದಲ್ಲಿ ಭಯೋತ್ಪಾದನೆ ಆರೋಪಿ ಪ್ರಾಗ್ಯಾಸಿಂಗ್ ವಿರುದ್ಧ ಕ್ರಮ ಜರುಗಿಸಲು ಆಗ್ರಹಿಸಿದರು. ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಹಾಬಲ ಮಾರ್ಲ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *