Header Ads
Breaking News

ಭರತನಾಟ್ಯ, ಶಾಸ್ತ್ರೀಯ ಸಂಗೀತ ಪರೀಕ್ಷೆ:ಆಳ್ವಾಸ್ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಸಾಧನೆ

ಮೂಡುಬಿದಿರೆ: ಎಸ್.ಎಸ್.ಎಲ್.ಸಿ ಪರೀಕ್ಷಾ ಮಂಡಳಿ ನಡೆಸಿದ ಭರತನಾಟ್ಯ ಜ್ಯೂನಿಯರ್, ಭರತನಾಟ್ಯ ಸೀನಿಯರ್, ಕರ್ನಾಟಿಕ್ ಸಂಗೀತ, ಹಿಂದೂಸ್ತಾನಿ ಜ್ಯೂನಿಯರ್, ಮೃದಂಗ ಹಾಗೂ ತಬಲ ಪರೀಕ್ಷೆಯಲ್ಲಿ ಆಳ್ವಾಸ್ ಕನ್ನಡ ಮಾಧ್ಯಮ ಹಾಗೂ ಆಳ್ವಾಸ್ ಇಂಗ್ಲೀಷ್ ಮಾಧ್ಯಮ ಶಾಲೆಗಳ ಒಟ್ಟು 58 ಮಂದಿ ಉತ್ತೀರ್ಣರಾಗಿದ್ದಾರೆ.ದೀಪಿಕಾ ಶೆಟ್ಟಿ(ಶೇ.91.25), ತೃಪ್ತಿ(ಶೇ.90.5),  ಮೇಘನಾ ಎಂ.ಜಿ(ಶೇ.90), ಸೌಜನ್ಯ(ಶೇ.8805), ಸ್ನೇಹಾ ಉದಯ್( ಶೇ.87.25), ಸಂಜನಾ(ಶೇ.86.25), ಶ್ರದ್ಧಾ ಸುಧೀರ್(ಶೇ.86.25), ಅಪ್ಸರಾ(ಶೇ.85.25), ವಿದ್ಯಾಶ್ರೀ( ಶೇ.85.25), ರಾಧಿಕಾ (ಶೇ.85.25), ಪೂರ್ಣಿಮಾ( ಶೇ.85 )ಸಹಿತ ಒಟ್ಟು25 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಭರತನಾಟ್ಯ ಸೀನಿಯರ್ ಪರೀಕ್ಷೆಯಲ್ಲಿ ಅನನ್ಯಾ ಭೂವನ್ (ಶೇ.86.83) ಸಹಿತ ೫ ಮಂದಿ, ಕರ್ನಾಟಿಕ್ ಸಂಗೀತದಲ್ಲಿ ಸಂಜನಾ ಸತೀಶ್ ಪಟ್ಗಾರ್(ಶೇ.94.5) ಸಹಿತ10 ಮಂದಿ, ಹಿಂದೂಸ್ತಾನಿ ಜ್ಯೂನಿಯರ್ ಪರೀಕ್ಷೆಯಲ್ಲಿ ಅರ್ಪಿತಾ(ಶೇ70.8) ಸಹಿತ11 ಮಂದಿ, ಮೃದಂಗ ಪರೀಕ್ಷೆಯಲ್ಲಿ ಗಣೇಶ್ ವೀರಪುರ್(ಶೇ.59.7) ಸಹಿತ6ಮಂದಿ ಹಾಗೂ ತಬಲ ಪರೀಕ್ಷೆಯಲ್ಲಿ ಗುರುಮೂರ್ತಿ ಚಂದ್ರಶೇಖರ್ ಹೆಗ್ಗಡೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.

Related posts

Leave a Reply