Header Ads
Breaking News

ಭಾರತದ ಎರಡು ಕೊರೊನಾ ವೈರಸ್ ಪ್ರಕರಣ ಪತ್ತೆ

ಭಾರತದಲ್ಲಿ ಎರಡು ಕೊರೋನಾ ವೈರಸ್ ಪ್ರಕರಣಗಳು ಸೋಮವಾರ ದೃಢಪಟ್ಟಿದ್ದು, ಕೋವಿದ್-19 ವೈರಸ್ ಸೋಂಕಿನ ಒಂದು ಶಂಕಿತ ಪ್ರಕರಣ ವರದಿಯಾಗಿದೆ. ವಿಶ್ವಾದ್ಯಂತ ಮೂರು ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿರುವ ಈ ಮಾರಕ ಸೋಂಕು, ಇಟೆಲಿಯಿಂದ ಹಿಂದಿರುಗಿದ ದೆಹಲಿ ನಿವಾಸಿಯಲ್ಲಿ ಮತ್ತು ದುಬೈನಿಂದ ಇತ್ತೀಚೆಗೆ ಆಗಮಿಸಿದ ತೆಲಂಗಾಣ ಮೂಲದ ವ್ಯಕ್ತಿಯಲ್ಲಿ ಪತ್ತೆಯಾಗಿದೆ. ಜೈಪುರದ ಸವಾಯಿ ಮಾನ್ ಸಿಂಗ್ ಆಸ್ಪತ್ರೆಯಲ್ಲಿ ಪ್ರತ್ಯೇಕ ವಿಭಾಗದಲ್ಲಿರುವ ಇಟೆಲಿ ಪ್ರವಾಸಿಯೊಬ್ಬರಿಗೆ ಕೂಡಾ ಸೋಂಕು ತಗುಲಿರುವ ಬಗ್ಗೆ ಶಂಕೆ ಇದೆ.

ಕೋವಿಡ್-19 ವೈರಸ್ ಪರೀಕ್ಷೆಯಲ್ಲಿ ಮೊದಲು ಧನಾತ್ಮಕ ಫಲಿತಾಂಶ ಬಂದಿದೆ. ಇದನ್ನು ಪುಣೆಯಲ್ಲಿರುವ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ ವತಿಯಿಂದ ಮರುದೃಢೀಕರಿಸುವ ಪ್ರಯತ್ನ ನಡೆದಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಈ ದೃಢೀಕರಣದ ಬಳಿಕ ಇದನ್ನು ಕೊರೋನಾ ಸೋಂಕು ಎಂದು ಪ್ರಕಟಿಸಲಾಗುವುದು ಎಂದು ಮೂಲಗಳು ಹೇಳಿವೆ.ಈ ಮಾರಕ ವೈರಸ್ ಹರಡದಂತೆ ಎಚ್ಚರ ವಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಸ್ವತಃ ಪರಿಸ್ಥಿತಿ ಮೇಲೆ ನಿಗಾ ವಹಿಸಿದ್ದಾರೆ.

Related posts

Leave a Reply

Your email address will not be published. Required fields are marked *