Header Ads
Header Ads
Breaking News

ಭಾರತದ ಗುಂಪು ಹಿಂಸಾ ಹತ್ಯೆಯನ್ನು ವಿರೋಧಿಸಿ ಅಭಿಯಾನ ಎಸ್‌ಡಿಪಿಐ ವತಿಯಿಂದ ಅಭಿಯಾನ ಆ.೨೨ ರಂದು ಪುತ್ತೂರಿನ ದರ್ಬೆ ವೃತ್ತದಲ್ಲಿ ಚಾಲನೆ

 

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಆ.೨೫ ರ ತನಕ “ಭಾರತದ ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೋಧಿಸಿ” ನಡೆಯುವ ರಾಷ್ಟ್ರೀಯ ಅಭಿಯಾನ ಕಾರ್ಯಕ್ರಮ ಚಾಲನೆ ಆ.೨೨ ರಂದು ಪುತ್ತೂರಿನ ದರ್ಬೆ ವೃತ್ತದಲ್ಲಿ ನಡೆಯಲಿದೆ ಎಂದು ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಕೆ. ತಿಳಿಸಿದ್ದಾರೆ.ಅವರು ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಡೆಸಿ ಮಾತನಾಡಿದರು, ಗೋ ರಕ್ಷಣಾ ಹೆಸರಿನಲ್ಲಿ ಈಗಾಗಲೇ ಹೆಚ್ಚಿನ ಸಂದರ್ಭಗಳಲ್ಲಿ ಗುಂಪು ಹಿಂಸಾ ಕೃತ್ಯಕಾರರ ಗುರಿ ಪಶು ವ್ಯಾಪಾರಸ್ಥರು, ದನದ ಮಾಂಸ ಸಾಗಾಟಗಾರರಾದ ಮುಸ್ಲಿಮರು ಮಾತ್ರವೇ ಆಗಿದ್ದಾರೆ ಎಂಬುದಾಗಿದೆ, ಪ್ರಧಾನ ಮಂತ್ರಿಯವರ ಹಗುರ ಮತ್ತು ಜಾರಿಕೆಯ ಹೇಳಿಕೆಯುವ ಈ ದೇಶದ ಮುಸ್ಲಿಂ ಸಮಾಜದ ಹಿತವನ್ನು ಕಾಪಾಡುವ ಬಗ್ಗೆಯಾಗಲಿ, ಭಯೋತ್ಪಾದಕ ಗೋ ರಕ್ಷಕರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಯಾವುದೇ ಉತ್ಸಾಹ ಇಲ್ಲದಿರುವುದು ಕಂಡು ಬರುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಎಸ್‌ಡಿಪಿಐ ಮುಖಂಡರಾದ ಅಬ್ದುಲ್ ಹಮೀದ್ ಮೆಜಸ್ಟಿಕ್, ಇಬ್ರಾಹಿಂ ಸಾಗರ್, ನಝೀರ್ ಸಿ.ಎ., ರಝಾಕ್ ಕೆನರಾ ಉಪಸ್ಥಿತರಿದ್ದರು.

Related posts

Leave a Reply