Header Ads
Header Ads
Breaking News

ಪೊಳಲಿಯ ಶ್ರೀ ರಾಜರಾಜೇಶ್ವರೀ ದೇವಿ ಕ್ಷೇತ್ರದಲ್ಲಿ ಭಾರತ ಶಿಕ್ಷಣ ಯಾತ್ರೆ, ದೆಹಲಿ ಚಲೋ ಆಂದೊಲನಕ್ಕೆ ಅದ್ದೂರಿಯ ಚಾಲನೆ

ಬಂಟ್ವಾಳ: ಒಂದೇ ದೇಶ ಒಂದೇ ಶಿಕ್ಷಣ ಜಾರಿಗಾಗಿ ಭಾರತ ಶಿಕ್ಷಣ ಯಾತ್ರೆ, ದೆಹಲಿ ಚಲೋ ಆಂದೊಲನಕ್ಕೆ ಭಾನುವಾರ ಪೊಳಲಿಯ ಶ್ರೀ ರಾಜರಾಜೇಶ್ವರೀ ದೇವಿ ಕ್ಷೇತ್ರದಲ್ಲಿ ಅದ್ದೂರಿಯ ಚಾಲನೆ ಸಿಕ್ಕಿತು.

ವಿಧಾನ ಪರಿಷತ್‌ನ ಮಾಜಿ ಸಭಾಪತಿ ಡಿ.ಎಚ್. ಶಂಕರ ಮೂರ್ತಿ ರಾಷ್ಟ್ರ ಧ್ವಜಾರೋಹಣ ನೆರವೇರಿಸುವ ಮೂಲಕ ರಥಯಾತ್ರೆಗೆ ಚಾಲನೆ ನೀಡಿದರು. ಇದಕ್ಕಿಂತಲೂ ಮೊದಲು ಅವರುಪೊಳಲಿಯ ಸರ್ವಮಂಗಳಾ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ ಈ ದೇಶ ಒಂದು, ಇಲ್ಲಿಯ ಮಕ್ಕಳು ಒಂದೇ, ಆ ಮಕ್ಕಳಿಗೆ ಒಂದೇ ರೀತಿಯ ಶಿಕ್ಷಣ ಸಿಗಬೇಕು ಎನ್ನುವುದು ಒಳ್ಳೆಯ ಚಿಂತನೆ ಎಂದರು.
ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್ ಅಧ್ಯಕ್ಷತೆ ವಹಿಸಿ ಮಾತನಾಡಿ ನಾನು, ನನ್ನ ಮನೆ, ನನ್ನ ಮಕ್ಕಳು ಎಂದರೆ ದೇಶ ಅಭಿವೃದ್ದಿಯಾಗುವುದಿಲ್ಲ, ಎಲ್ಲ ಮಕ್ಕಳು ಶಿಕ್ಷಣ ಪಡೆದಾಗ ಮಾತ್ರ ದೇಶ ಅಭಿವೃದ್ದಿಯ ಪಥದಲ್ಲಿ ಸಾಗಲು ಸಾಧ್ಯವಿದೆ ಎಂದರು.

Related posts

Leave a Reply

Your email address will not be published. Required fields are marked *